ದರ್ಶನ್ ತೂಗುದೀಪ ಪರಿಸ್ಥಿತಿ ಬಗ್ಗೆ ಗಾಯಕ ಬಾಳು ಬೆಳಗುಂದಿ ಹೇಳೋದೇನು?
‘ಸರಿಗಮಪ’ ಖ್ಯಾತಿಯ ಸಿಂಗರ್ ಬಾಳು ಬೆಳಗುಂದಿ ಅವರ ಹೊಸ ಹಾಡು ಬಿಡುಗಡೆ ಆಗಿದೆ. ‘ಬ್ರ್ಯಾಟ್’ ಚಿತ್ರದ ‘ಗಂಗಿ ಗಂಗಿ’ ಗೀತೆಗೆ ಅವರೇ ಸಾಹಿತ್ಯ ಬರೆದು ಹಾಡಿದ್ದಾರೆ. ಸಾಂಗ್ ಬಿಡುಗಡೆ ಬಳಿಕ ಅವರು ಟಿವಿ9 ಜತೆ ಮಾತನಾಡಿದರು. ಈ ವೇಳೆ ದರ್ಶನ್ ಬಗ್ಗೆಯೂ ಅವರು ಮಾತಾಡಿದರು.
‘ಸರಿಗಮಪ’ ಖ್ಯಾತಿಯ ಗಾಯಕ ಬಾಳು ಬೆಳಗುಂದಿ ಅವರ ಹೊಸ ಸಾಂಗ್ ಬಿಡುಗಡೆ ಆಗಿದೆ. ‘ಬ್ರ್ಯಾಟ್’ ಸಿನಿಮಾದ ‘ಗಂಗಿ ಗಂಗಿ’ (Gangi Gangi) ಗೀತೆಗೆ ಅವರೇ ಸಾಹಿತ್ಯ ಬರೆದು ಹಾಡಿದ್ದಾರೆ. ಹಾಡಿನ ಬಿಡುಗಡೆ ಬಳಿಕ ಅವರು ಟಿವಿ9 ಜೊತೆ ಮಾತನಾಡಿದರು. ಈ ವೇಳೆ ನಟ ದರ್ಶನ್ (Darshan Thoogudeepa) ಬಗ್ಗೆಯೂ ಅವರು ಮಾತಾಡಿದರು. ‘ನಾನು ಒಬ್ಬ ಅಭಿಮಾನಿಯಾಗಿ ದರ್ಶನ್ ಅವರಿಗೆ ಕೆಟ್ಟದ್ದು ಬಯಸೋಕೆ ಆಗಲ್ಲ. ಕಾನೂನಿನ ಮೂಲಕ ಅವರು ಮಾಡಿದ್ದು ಸರಿ ಅಥವಾ ತಪ್ಪು ಅಂತ ಕೂಡ ನಾವು ಹೇಳೋಕೆ ಆಗಲ್ಲ. ಕೆಟ್ಟ ಟೈಮ್ ಎಲ್ಲರಿಗೂ ಬರುತ್ತೆ. ಆ ಟೈಮ್ ಕಳೆದು, ಅವರು ಮತ್ತೆ ಮೊದಲಿನ ರೀತಿ ಆಗಬೇಕು. ಅವರನ್ನು ನಾವು ದೊಡ್ಡ ಪರದೆ ಮೇಲೆ ಮತ್ತೆ ನೋಡಬೇಕು’ ಎಂದು ಬಾಳು ಬೆಳಗುಂದಿ (Balu Belagundi) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
