Video: ಚಿನ್ನದಂಗಡಿಯಲ್ಲಿ ಒಡವೆ ಕದ್ದಿದ್ದಲ್ಲದೆ ಪೊಲೀಸರ ಮೇಲೆ ಕೈ ಮಾಡಿದ ಮಹಿಳೆ
ಮಹಿಳೆಯೊಬ್ಬಳು ಚಿನ್ನದಂಗಡಿಯಲ್ಲಿ ಒಡವೆ ಕದ್ದಿದ್ದಲ್ಲದೆ, ಆಕೆಯನ್ನು ಬಂಧಿಸಲು ಬಂದ ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ಡೆಹ್ರಾಡೂನ್ನಲ್ಲಿ ನಡೆದಿದೆ. ಆಭರಣ ಅಂಗಡಿಯಿಂದ ಚಿನ್ನದ ಉಂಗುರಗಳನ್ನು ಕದಿಯುತ್ತಿದ್ದಾಗ ಮಹಿಳೆಯೊಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಪೊಲೀಸರು ಸ್ಥಳಕ್ಕೆ ಬಂದಾಗ, ಚಿನ್ನದ ಉಂಗುರಗಳನ್ನು ಎಲ್ಲೋ ಬಚ್ಚಿಟ್ಟಿದ್ದ ಮಹಿಳೆ ಅವರ ಮೇಲೆ ಹಲ್ಲೆ ನಡೆಸಿ ತೀವ್ರ ಜಗಳವಾಡಿದ್ದಾಳೆ.
ಡೆಹ್ರಾಡೂನ್, ಆಗಸ್ಟ್ 01: ಮಹಿಳೆಯೊಬ್ಬಳು ಚಿನ್ನದಂಗಡಿಯಲ್ಲಿ ಒಡವೆ ಕದ್ದಿದ್ದಲ್ಲದೆ, ಆಕೆಯನ್ನು ಬಂಧಿಸಲು ಬಂದ ಮಹಿಳಾ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ಡೆಹ್ರಾಡೂನ್ನಲ್ಲಿ ನಡೆದಿದೆ. ಆಭರಣ ಅಂಗಡಿಯಿಂದ ಚಿನ್ನದ ಉಂಗುರಗಳನ್ನು ಕದಿಯುತ್ತಿದ್ದಾಗ ಮಹಿಳೆಯೊಬ್ಬಳು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾಳೆ. ಪೊಲೀಸರು ಸ್ಥಳಕ್ಕೆ ಬಂದಾಗ, ಚಿನ್ನದ ಉಂಗುರಗಳನ್ನು ಎಲ್ಲೋ ಬಚ್ಚಿಟ್ಟಿದ್ದ ಮಹಿಳೆ ಅವರ ಮೇಲೆ ಹಲ್ಲೆ ನಡೆಸಿ ತೀವ್ರ ಜಗಳವಾಡಿದ್ದಾಳೆ.
ಆದರೆ ಕೊನೆಯಲ್ಲಿ ಸೋತು ಶರಣಾಗಿದ್ದಾಳೆ. ಮಹಿಳೆಯೊಬ್ಬಳು ಆಭರಣ ಅಂಗಡಿಗೆ ನುಗ್ಗಿ ಅಲ್ಲಿಂದ ಚಿನ್ನದ ಉಂಗುರಗಳನ್ನು ಕದ್ದಿದ್ದಾಳೆ.ಅದೃಷ್ಟವಶಾತ್ ಆಕೆ ಕದಿಯುವಾಗ ಅಂಗಡಿಯವರೊಬ್ಬರು ಅದನ್ನು ಗಮನಿಸಿದ್ದರು. ಪೊಲೀಸರಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು, ಮಹಿಳೆ ಭಯಭೀತಳಾಗಿ ಗದ್ದಲ ಸೃಷ್ಟಿಸಿದ್ದಳು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

