ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು

|

Updated on: Oct 06, 2024 | 12:31 PM

ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಶಹದಾರ ಪ್ರದೇಶದ ವಿಶ್ವಕರ್ಮ ನಗರದಲ್ಲಿ ರಾಮಲೀಲಾ ನಾಟಕದ ಸಂದರ್ಭದಲ್ಲಿ ಭಗವಾನ್ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಹಠಾತ್ ಸಾವನ್ನಪ್ಪಿದ್ದಾರೆ.

ಮೃತರನ್ನು ಸುಶೀಲ್ ಕೌಶಿಕ್ ಎಂದು ಗುರುತಿಸಲಾಗಿದೆ, ದಸರಾ ಆಚರಣೆಗೆ ಮುಂಚಿತವಾಗಿ ನಾಟಕಗಳನ್ನು ಆಯೋಜಿಸಲಾಗಿದ್ದ ಹಲವಾರು ನಾಟಕಗಳಲ್ಲಿ ಇದು ಕೂಡಾ ಒಂದು. ವೀಡಿಯೊದಲ್ಲಿ ಕೌಶಿಕ್ ವೇದಿಕೆಯಿಂದ ಹಠಾತ್ತನೆ ಕೆಳಗಿಳಿಯುವ ಮೊದಲು ತನ್ನ ಎದೆಯನ್ನು ಹಿಡಿದುಕೊಂಡು ಪಾತ್ರ ನಿಭಾಯಿಸುತ್ತಿರುವುದನ್ನು ಕಾಣಬಹುದು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ