ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಿದ್ದರಾಮಯ್ಯ ಬಗ್ಗೆ ಸೋಮಣ್ಣ ಸಾಫ್ಟ್​ಕಾರ್ನರ್​

ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಿದ್ದರಾಮಯ್ಯ ಬಗ್ಗೆ ಸೋಮಣ್ಣ ಸಾಫ್ಟ್​ಕಾರ್ನರ್​
| Updated By: ಗಂಗಾಧರ​ ಬ. ಸಾಬೋಜಿ

Updated on: Oct 06, 2024 | 1:54 PM

ಬಳ್ಳಾರಿಯ ಪಾರ್ವತಿ ನಗರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಕೇಂದ್ರ ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಚಾಲನೆ ನೀಡಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ. ನಾವು ಯಾರೂ ಸಿದ್ದರಾಮಯ್ಯ ಪತ್ನಿ ಬಗ್ಗೆ ಮಾತನಾಡಿಲ್ಲ ಎಂದು ಸಿಎಂ ಬಗ್ಗೆ ಸಾಫ್ಟ್​ಕಾರ್ನರ್ ವ್ಯಕ್ತಪಡಿಸಿದ್ದಾರೆ.​

ಬಳ್ಳಾರಿ, ಅಕ್ಟೋಬರ್​ 06: ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತನಾಡುವುದು ಬೇಡ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಬಗ್ಗೆ ಕೇಂದ್ರ ಸಚಿವ ಸೋಮಣ್ಣ ಸಾಫ್ಟ್​ಕಾರ್ನರ್ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾನೂನು ಇದೆ, ಅದರ ಪಾಡಿಗೆ ಅದು ತನಿಖೆ ನಡೆಸುತ್ತೆ. ಈ ಬಗ್ಗೆ ಎಷ್ಟು ಬಾರಿ ಮಾತನಾಡಿದ್ರೂ ಅಷ್ಟೇ. ಸಿಎಂ ರಾಜೀನಾಮೆ ಪಡೆಯೋದು ಬಿಡೋದು ಅವರ ಪಕ್ಷಕ್ಕೆ ಬಿಟ್ಟಿದ್ದು. ಹಗರಣ ಬಗ್ಗೆ ಏನು ಮಾಡುತ್ತೆ ಅನ್ನೋದು ಅವರ ಪಕ್ಷಕ್ಕೆ ಬಿಟ್ಟದ್ದು. ನಾವು ಯಾರೂ ಸಿದ್ದರಾಮಯ್ಯ ಪತ್ನಿ ಬಗ್ಗೆ ಮಾತನಾಡಿಲ್ಲ. ಅವರ ಬಗ್ಗೆ ನಮಗೆ ಗೌರವ ಇದೆ. ಊಹೆ ಮಾಡಿಕೊಂಡು ಮಾತನಾಡಬೇಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us