Video: ದೆಹಲಿ ಸ್ಫೋಟಕ್ಕೂ ಮುನ್ನ ಮಸೀದಿ ಹೊರಗೆ ಉಗ್ರ ಉಮರ್ ಸುತ್ತಾಡುತ್ತಿರುವ ವಿಡಿಯೋ ವೈರಲ್
ದೆಹಲಿಯ ಕೆಂಪುಕೋಟೆ ಬಳಿ ನವೆಂಬರ್ 10ರಂದು ಸ್ಫೋಟ ಸಂಭವಿಸಿ 10ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದೆ. ಈ ಸ್ಫೋಟಕ್ಕೆ ಉಮರ್ ಎಂಬಾತನೇ ಕಾರಣ ಎಂಬುದನ್ನು ಡಿಎನ್ಎ ಪರೀಕ್ಷೆಯಲ್ಲಿ ಸಾಬೀತಾಗಿದೆ. ಆತ ಸ್ಫೋಟಕಗಳನ್ನು ಸ್ಫೋಟಿಸುವುದಕ್ಕೂ ಕೆಲವು ಗಂಟೆಗಳ ಹಿಂದೆ ಆಸಿಫ್ ಅಲಿ ರಸ್ತೆಯಲ್ಲಿರುವ ಮಸೀದಿ ಬಳಿ ಓಡಾಡಿರುವ ವಿಡಿಯೋ ದೊರೆತಿದೆ. ತನಿಖೆಯ ವೇಳೆ ಉಮರ್‌ನ ಹಿನ್ನೆಲೆ, ಸಂಪರ್ಕಗಳು ಮತ್ತು ಕೋಡ್‌ವರ್ಡ್‌ಗಳನ್ನು ಬಳಸಿ ನಡೆಸಿದ ಪೂರ್ವನಿಯೋಜಿತ ಪಿತೂರಿಗಳು ಬಯಲಾಗಿವೆ. ಸ್ಫೋಟದ ತನಿಖೆ ಹರಿಯಾಣದ ಮೇವತ್‌ವರೆಗೆ ತಲುಪಿದ್ದು, ಸ್ಫೋಟಕ ಅಮೋನಿಯಂ ನೈಟ್ರೇಟ್‌ನ ಮೂಲ ಪತ್ತೆಯಾಗಿದೆ
ನವದೆಹಲಿ, ನವೆಂಬರ್ 13: ದೆಹಲಿಯ ಕೆಂಪುಕೋಟೆ ಬಳಿ ನವೆಂಬರ್ 10ರಂದು ಸ್ಫೋಟ ಸಂಭವಿಸಿ 10ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿದೆ. ಈ ಸ್ಫೋಟಕ್ಕೆ ಉಮರ್ ಎಂಬಾತನೇ ಕಾರಣ ಎಂಬುದನ್ನು ಡಿಎನ್ಎ ಪರೀಕ್ಷೆಯಲ್ಲಿ ಸಾಬೀತಾಗಿದೆ. ಆತ ಸ್ಫೋಟಕಗಳನ್ನು ಸ್ಫೋಟಿಸುವುದಕ್ಕೂ ಕೆಲವು ಗಂಟೆಗಳ ಹಿಂದೆ ಆಸಿಫ್ ಅಲಿ ರಸ್ತೆಯಲ್ಲಿರುವ ಮಸೀದಿ ಬಳಿ ಓಡಾಡಿರುವ ವಿಡಿಯೋ ದೊರೆತಿದೆ.
ತನಿಖೆಯ ವೇಳೆ ಉಮರ್‌ನ ಹಿನ್ನೆಲೆ, ಸಂಪರ್ಕಗಳು ಮತ್ತು ಕೋಡ್‌ವರ್ಡ್‌ಗಳನ್ನು ಬಳಸಿ ನಡೆಸಿದ ಪೂರ್ವನಿಯೋಜಿತ ಪಿತೂರಿಗಳು ಬಯಲಾಗಿವೆ. ಸ್ಫೋಟದ ತನಿಖೆ ಹರಿಯಾಣದ ಮೇವತ್‌ವರೆಗೆ ತಲುಪಿದ್ದು, ಸ್ಫೋಟಕ ಅಮೋನಿಯಂ ನೈಟ್ರೇಟ್‌ನ ಮೂಲ ಪತ್ತೆಯಾಗಿದೆ. ಉಗ್ರರು ನುಹ್ ಪ್ರದೇಶದ ಗೊಬ್ಬರದ ಅಂಗಡಿಯಿಂದ ನೈಟ್ರೇಟ್ ತಯಾರಿಕೆಗೆ ಬೇಕಾದ ಸಾಮಗ್ರಿಗಳನ್ನು ಖರೀದಿಸಿರುವುದು ತಿಳಿದುಬಂದಿದೆ. ಶಂಕಿತ ಉಗ್ರ ಮುಜಾಮಿಲ್‌ನ ಮಾಹಿತಿ ಆಧರಿಸಿ ನವದೆಹಲಿ ಪೊಲೀಸ್ ಮತ್ತು ವಿಶೇಷ ದಳದ ತಂಡಗಳು ದಾಳಿ ನಡೆಸಿ, ಅಂಗಡಿ ಮಾಲೀಕರ ವಿಚಾರಣೆ ನಡೆಸುತ್ತಿವೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
