ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ವಿದ್ಯುತ್ ತಂತಿ ತುಂಡಾಗಿ ಕಬ್ಬಿಣದ ರೇಲಿಂಗ್‌ಗೆ ತಗುಲಿ ಈ ಘಟನೆ ಸಂಭವಿಸಿದೆ. ನವರಾತ್ರಿಗೆ ಅಳವಡಿಸಲಾದ ಹ್ಯಾಲೊಜೆನ್ ದೀಪಗಳಿಗೆ ತಂತಿಯನ್ನು ಬಳಸಲಾಗಿತ್ತು. ಈ ಅವ್ಯವಸ್ಥೆಯಿಂದಾಗಿ ದೇವಸ್ಥಾನದ ಆವರಣದಲ್ಲಿ ನೂಕುನುಗ್ಗಲು ಉಂಟಾಯಿತು.
ನಿನ್ನೆ ಮಧ್ಯರಾತ್ರಿ ದೆಹಲಿಯ ಕಲ್ಕಾಜಿ ದೇವಸ್ಥಾನದಲ್ಲಿ ವಿದ್ಯುದಾಘಾತದಿಂದ 9ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಕಾಲ್ತುಳಿತದ ಸಂದರ್ಭದಲ್ಲಿ ಇನ್ನೂ 6 ವ್ಯಕ್ತಿಗಳು ಗಾಯಗೊಂಡಿದ್ದಾರೆ. ಗಾಯಗೊಂಡವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ದೇವಸ್ಥಾನದಲ್ಲಿ ಸಾಲಿನಲ್ಲಿ ನಿಂತಿದ್ದ ಬಾಲಕ ರೈಲಿಂಗ್‌ಗೆ ತಾಗಿ ಸಾವನ್ನಪ್ಪಿದ್ದಾನೆ. ನವರಾತ್ರಿ ಸಮಯದಲ್ಲಿ ಅಳವಡಿಸಲಾದ ಹ್ಯಾಲೊಜೆನ್ ದೀಪಗಳಿಗೆ ಬಳಸಲಾದ ವಿದ್ಯುತ್ ತಂತಿಯು ತುಂಡಾಗಿ ಕಬ್ಬಿಣದ ರೇಲಿಂಗ್‌ಗೆ ಸ್ಪರ್ಶಿಸಿದಾಗ ಕರೆಂಟ್ ಶಾಕ್ ಸಂಭವಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos