‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
ಇತ್ತೀಚೆಗೆ ಧನರಾಜ್ ಅವರು ಅತ್ತಿದ್ದರು. ಈಗ ಐಶ್ವರ್ಯಾ ಕೂಡ ಕಣ್ಣೀರು ಹಾಕುತ್ತಾ ಕುಳಿತಿದ್ದಾರೆ. ಇತರೆ ಸ್ಪರ್ಧಿಗಳ ಮಾತಿನ ಭರದಲ್ಲಿ ಐಶ್ವರ್ಯಾಗೆ ನೋವಾಗಿದೆ. ಆ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಸ್ವರ್ಗ ಮತ್ತು ನರಕದ ಕಾನ್ಸೆಪ್ಟ್ನಲ್ಲಿ ಶೋ ಆರಂಭ ಆಗಿದೆ. ಐಶ್ವರ್ಯಾ ಅವರು ಸ್ವರ್ಗದಲ್ಲಿ ಇದ್ದರೂ ಕೂಡ ಕಣ್ಣೀರು ಹಾಕುವುದು ತಪ್ಪಲಿಲ್ಲ.
ಕಿರುತೆರೆ ನಟಿ ಐಶ್ವರ್ಯಾ ಅವರು ಬಿಗ್ ಬಾಸ್ ಮನೆಯಲ್ಲಿ ಗಳಗಳನೆ ಅತ್ತಿದ್ದಾರೆ. ಅವರ ಕಣ್ಣೀರಿಗೆ ಕಾರಣ ಆಗಿರುವುದು ಖಾರವಾದ ಮಾತುಗಳು. ಅಳುತ್ತಾ ಕುಳಿತ ಐಶ್ವರ್ಯಾಗೆ ಗೌತಮಿ ಜಾಧವ್, ಭವ್ಯಾ ಗೌಡ ಅವರು ಸಮಾಧಾನ ಮಾಡಿದ್ದಾರೆ. ‘ನಮ್ಮ ಮನೆಯ ಕೆಲಸದವರಿಗೂ ನಾನು ಈ ರೀತಿ ಮಾತುಗಳನ್ನು ಹೇಳಲ್ಲ’ ಎಂದು ಐಶ್ವರ್ಯಾ ಅವರು ಕಣ್ಣೀರು ಸುರಿಸಿದ್ದಾರೆ. ಐಶ್ವರ್ಯಾಗೆ ಮಾತುಗಳಿಂದ ನೋವುಂಟು ಮಾಡಿದ್ದು ಯಾರು ಎಂಬುದು ಅಕ್ಟೋಬರ್ 3ರ ಸಂಚಿಕೆಯಲ್ಲಿ ತಿಳಿಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

