ದೆಹಲಿಯಲ್ಲಿ ಅಕ್ರಮ ಕಟ್ಟಡಗಳ ವಿರುದ್ಧ ಎಂಸಿಡಿ ಸಮರ: ನೆಹರು ವಿಹಾರ್‌ನಲ್ಲಿ ವಾಲಿ ನಿಂತ ಮನೆ ನೆಲಸಮ

Updated on: Sep 09, 2026 | 3:20 PM

ದಕ್ಷಿಣ ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು ಏಳು ಮಂದಿ ಸಾವನ್ನಪ್ಪಿದ ಬೆನ್ನಲ್ಲೇ, ದೆಹಲಿ ಮಹಾನಗರ ಪಾಲಿಕೆ (MCD) ರಾಜಧಾನಿಯಾದ್ಯಂತ ಅಕ್ರಮ ಕಟ್ಟಡ ನಿರ್ಮಾಣಗಳ ವಿರುದ್ಧ ಭಾರಿ ಸಮರ ಸಾರಿದೆ. ಉತ್ತರ ದೆಹಲಿಯ ಪ್ರಮುಖ ವಿದ್ಯಾರ್ಥಿ ವಸತಿ ಪ್ರದೇಶವಾದ ನೆಹರು ವಿಹಾರ್‌ನಲ್ಲಿ ಸತತವಾಗಿ ಒಂದು ಬದಿಗೆ ವಾಲಿ ನಿಂತಿರುವ ಅಪಾಯಕಾರಿ ಕಟ್ಟಡದ ವಿರುದ್ಧ ಎಂಸಿಡಿ ಕ್ರಮಕ್ಕೆ ಮುಂದಾಗಿದೆ.

ನವದೆಹಲಿ, ಸೆಪ್ಟೆಂಬರ್ 09: ದಕ್ಷಿಣ ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ಐದು ಅಂತಸ್ತಿನ ಕಟ್ಟಡ ಕುಸಿದು ಏಳು ಮಂದಿ ಸಾವನ್ನಪ್ಪಿದ ಬೆನ್ನಲ್ಲೇ, ದೆಹಲಿ ಮಹಾನಗರ ಪಾಲಿಕೆ (MCD) ರಾಜಧಾನಿಯಾದ್ಯಂತ ಅಕ್ರಮ ಕಟ್ಟಡ ನಿರ್ಮಾಣಗಳ ವಿರುದ್ಧ ಭಾರಿ ಸಮರ ಸಾರಿದೆ. ಉತ್ತರ ದೆಹಲಿಯ ಪ್ರಮುಖ ವಿದ್ಯಾರ್ಥಿ ವಸತಿ ಪ್ರದೇಶವಾದ ನೆಹರು ವಿಹಾರ್‌ನಲ್ಲಿ ಸತತವಾಗಿ ಒಂದು ಬದಿಗೆ ವಾಲಿ ನಿಂತಿರುವ ಅಪಾಯಕಾರಿ ಕಟ್ಟಡದ ವಿರುದ್ಧ ಎಂಸಿಡಿ ಕ್ರಮಕ್ಕೆ ಮುಂದಾಗಿದೆ.

ಇದರೊಂದಿಗೆ ನಗರದ ಎಲ್ಲಾ ಪಿಜಿ ಮತ್ತು ಹಾಸ್ಟೆಲ್ ಕೇಂದ್ರಗಳಲ್ಲಿನ ಕಟ್ಟಡಗಳ ‘ರಚನಾತ್ಮಕ ಸುರಕ್ಷತಾ ತಪಾಸಣೆ’ ನಡೆಸಲು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಉತ್ತರ ದೆಹಲಿಯ ನೆಹರು ವಿಹಾರ್‌ನಲ್ಲಿ ಚರಂಡಿ ಪೈಪ್‌ಲೈನ್ ಸೋರಿಕೆಯಿಂದಾಗಿ ಒಂದು ವಸತಿ ಕಟ್ಟಡ ಪದೇಪದೇ ವಾಲುವುದನ್ನು ಸ್ಥಳೀಯರು ಗಮನಿಸಿ ದೂರು ನೀಡಿದ್ದರು. ಈ ಕಟ್ಟಡವನ್ನು ಒಮ್ಮೆ ಕೆಡವಿ ಮೂರು ವರ್ಷಗಳ ಹಿಂದೆ ಮರುನಿರ್ಮಾಣ ಮಾಡಿದ್ದರೂ ಮತ್ತೆ ವಾಲುತ್ತಿದ್ದು, ಅಕ್ಕಪಕ್ಕದ ಮನೆಗಳಿಗೂ ಅಪಾಯ ತಂದೊಡ್ಡಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More