Video: ದೆಹಲಿಯ ಸಂಗಮ್ ವಿಹಾರದಲ್ಲಿ ಮನೆಗೆ ಬೆಂಕಿ, ನಾಲ್ವರು ಸಜೀವದಹನ
ದೆಹಲಿಯ ಸಂಗಮ್ ವಿಹಾರದಲ್ಲಿರುವ ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕುಟುಂಬದ ನಾಲ್ವರು ಸದಸ್ಯರು ಸಜೀವದಹನಗೊಂಡಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಸಿಆರ್ಗೆ ಬಂದ ಕರೆ ಆಧರಿಸಿ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದ್ದರು, ಆದರೆ ಇಡೀ ಕಟ್ಟಡ ಬೆಂಕಿಯಿಂದ ಆವೃತವಾಗಿರುವುದನ್ನು ಕಂಡರು. ವರದಿಗಳ ಪ್ರಕಾರ, ಬೆಂಕಿ ನೆಲ ಮಹಡಿಯಲ್ಲಿರುವ ಚಪ್ಪಲಿ ಅಂಗಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಮೇಲೆ ಹಬ್ಬಿತ್ತು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.ಅಷ್ಟರಲ್ಲಾಗಲೆ ನಾಲ್ಕು ಮಂದಿಯ ಜೀವ ಹೋಗಿತ್ತು.
ನವದೆಹಲಿ, ನವೆಂಬರ್ 30:ದೆಹಲಿಯ ಸಂಗಮ್ ವಿಹಾರದಲ್ಲಿರುವ ಮನೆಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಕುಟುಂಬದ ನಾಲ್ವರು ಸದಸ್ಯರು ಸಜೀವದಹನಗೊಂಡಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಘಟನೆಯಲ್ಲಿ ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಿಸಿಆರ್ಗೆ ಬಂದ ಕರೆ ಆಧರಿಸಿ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದ್ದರು, ಆದರೆ ಇಡೀ ಕಟ್ಟಡ ಬೆಂಕಿಯಿಂದ ಆವೃತವಾಗಿರುವುದನ್ನು ಕಂಡರು. ವರದಿಗಳ ಪ್ರಕಾರ, ಬೆಂಕಿ ನೆಲ ಮಹಡಿಯಲ್ಲಿರುವ ಚಪ್ಪಲಿ ಅಂಗಡಿಯಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ಬಳಿಕ ಮೇಲೆ ಹಬ್ಬಿತ್ತು. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.ಅಷ್ಟರಲ್ಲಾಗಲೆ ನಾಲ್ಕು ಮಂದಿಯ ಜೀವ ಹೋಗಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ