AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

34 ಎಸೆತಗಳಲ್ಲಿ 37 ರನ್ ಬಾರಿಸಿದ ಬಾಬರ್: ಟಿ20 ಸರಣಿ ಗೆದ್ದ ಪಾಕಿಸ್ತಾನ್

34 ಎಸೆತಗಳಲ್ಲಿ 37 ರನ್ ಬಾರಿಸಿದ ಬಾಬರ್: ಟಿ20 ಸರಣಿ ಗೆದ್ದ ಪಾಕಿಸ್ತಾನ್

ಝಾಹಿರ್ ಯೂಸುಫ್
|

Updated on:Nov 30, 2025 | 8:55 AM

Share

Pakistan vs Sri Lanka: ಸುಲಭ ಗುರಿ ಹೊಂದಿದ್ದರೂ ಬಿರುಸಿನ ಬ್ಯಾಟಿಂಗ್ ನಡೆಸದೇ ಬಾಬರ್ ಆಝಂ ಬರೋಬ್ಬರಿ 34 ಎಸೆತಗಳನ್ನು ಎದುರಿಸಿ ಅಜೇಯ 37 ರನ್ ಬಾರಿಸಿದರು. ಪರಿಣಾಮ 115 ರನ್​ಗಳ ಗುರಿ ತಲುಪಲು ಪಾಕಿಸ್ತಾನ್ ತಂಡ 18.4 ಓವರ್​ಗಳನ್ನು ತೆಗೆದುಕೊಂಡಿತು. ಈ ಮೂಲಕ ಶ್ರೀಲಂಕಾ ತಂಡವನ್ನು 6 ವಿಕೆಟ್​ಗಳಿಂದ ಸೋಲಿಸಿ ಪಾಕ್ ಪಡೆ ತ್ರಿಕೋನ ಸರಣಿ ಗೆದ್ದುಕೊಂಡಿದೆ.

ಶ್ರೀಲಂಕಾ, ಝಿಂಬಾಬ್ವೆ ವಿರುದ್ಧದ ತ್ರಿಕೋನ ಸರಣಿಯಲ್ಲಿ ಪಾಕಿಸ್ತಾನ್ ತಂಡ ಟ್ರೋಫಿ ಎತ್ತಿ ಹಿಡಿದಿದೆ. ಈ ಸರಣಿಯ ಫೈನಲ್​ನಲ್ಲಿ ಪಾಕಿಸ್ತಾನ್ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದವು. ರಾವಲ್ಪಿಂಡಿಯಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಟಾಸ್ ಗೆದ್ದ ಪಾಕ್ ತಂಡದ ನಾಯಕ ಸಲ್ಮಾನ್ ಅಲಿ ಅಘಾ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡವು 19.1 ಓವರ್​ಗಳಲ್ಲಿ ಕೇವಲ 114 ರನ್​ಗಳಿಸಿ ಆಲೌಟ್ ಆಯಿತು. ಈ ಸುಲಭ ಗುರಿ ಬೆನ್ನತ್ತಿದ ಪಾಕಿಸ್ತಾನ್ ಮೊದಲ ವಿಕೆಟ್​​ಗೆ 46 ರನ್ ಪೇರಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬಾಬರ್ ಆಝಂ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದರು.

ಅತ್ತ ಸುಲಭ ಗುರಿ ಹೊಂದಿದ್ದರೂ ಬಿರುಸಿನ ಬ್ಯಾಟಿಂಗ್ ನಡೆಸದೇ ಬಾಬರ್ ಆಝಂ ಬರೋಬ್ಬರಿ 34 ಎಸೆತಗಳನ್ನು ಎದುರಿಸಿ ಅಜೇಯ 37 ರನ್ ಬಾರಿಸಿದರು. ಪರಿಣಾಮ 115 ರನ್​ಗಳ ಗುರಿ ತಲುಪಲು ಪಾಕಿಸ್ತಾನ್ ತಂಡ 18.4 ಓವರ್​ಗಳನ್ನು ತೆಗೆದುಕೊಂಡಿತು. ಈ ಮೂಲಕ ಶ್ರೀಲಂಕಾ ತಂಡವನ್ನು 6 ವಿಕೆಟ್​ಗಳಿಂದ ಸೋಲಿಸಿ ಪಾಕ್ ಪಡೆ ತ್ರಿಕೋನ ಸರಣಿ ಗೆದ್ದುಕೊಂಡಿದೆ.

 

Published on: Nov 30, 2025 08:53 AM