ದೆಹಲಿ ಆಗ್ನೇಯ ವಿಭಾಗದ ಡಿಸಿಪಿ ಉಷಾ ರಂಗ್ನಾನಿ ತಮ್ಮ ದಿಟ್ಟ ಕ್ರಮಗಳ ಮೂಲಕ ಜನಮೆಚ್ಚುಗೆ ಗಳಿಸಿದ್ದಾರೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 21, 2022 | 6:47 PM

ಉಷಾ ಅವರು ತಮ್ಮ ದಿಟ್ಟ ಕ್ರಮಗಳಿಂದಾಗಿ ಜನಪ್ರಿಯ ಪೊಲೀಸ್ ಅಧಿಕಾರಿ ಅನಿಸಿಕೊಂಡಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಅವರು ರಾಜಕೀಯ ಒತ್ತಡಗಳಿಗೆ ಮಣಿದವರಲ್ಲ.

ದೆಹಲಿಯ ಜಹಾಂಗಿರಪುರಿಯಲ್ಲಿ ಶನಿವಾರ ಹನುಮಾನ ಜಯಂತಿ (Hanuman Jayanti) ಸಂದರ್ಭದಲ್ಲಿ ನಡೆದ ಹಿಂಸಾಚಾರ (violence) ರಾಷ್ಟ್ರದೆಲ್ಲಡೆ ಸದ್ದು ಮಾಡುತ್ತಿದೆ. ಶೋಭಾಯಾತ್ರೆ ನಡೆಯುತ್ತಿದ್ದಾಗ ಮುಸ್ಲಿಂ ಸಮುದಾಯದ (Muslim community) ಕೆಲವರು ಕಲ್ಲು ತೂರಾಟ ನಡೆಸಿದರು ಎಂದು ಆರೋಪಿಲಾಗಿದ್ದು ಅದಾದ ಬಳಿಕವೇ ಎರಡು ಸಮುದಾಯಗಳ ನಡುವೆ ಸಂಘರ್ಷ ಆರಂಭವಾಯಿತು. ಪೊಲೀಸರು ಈಗಾಗಲೇ ಒಂದಷ್ಟು ಜನರನ್ನು ವಶಕ್ಕೆ ಪಡೆದಿದ್ದಾರೆ. ನಿಮಗೆ ಗೊತ್ತಿದೆ, ಕೋಮು ಗಲಭೆಯಲ್ಲಿ ಪಾಲ್ಗೊಂಡವರ ಮನೆಗಳನ್ನು ಬುಲ್ ಡೋಜರ್ ಗಳ ಮೂಲಕ ನೆಲಸಮಗೊಳಿಸಲಾಗುತ್ತಿದೆ. ಈ ಕ್ರಮ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ನಲ್ಲಿ ಜಾರಿಯಲ್ಲಿದ್ದು ಈಗ ದೆಹಲಿಯಲ್ಲೂ ಅದನ್ನೇ ಮಾಡಲಾಗುತ್ತಿದೆ. ರಾಷ್ಟ್ರ ರಾಜಧಾನಿ ಮಹಾನಗರ ಪಾಲಿಕೆ (ಎಮ್ ಸಿ ಡಿ) ಬುಧವಾರದಂದು ಜಹಾಂಗೀರಪುರಿಯಲ್ಲಿ ಅಕ್ರಮ ಕಟ್ಟಡ ತೆರವುಗೊಳಿಸುವ ಕಾರ್ಯಾಚರಣೆ ನಡೆಸಿತು.

ಇದು ಒತ್ತುವರಿ ತೆರವಿನ ನೆಪದಲ್ಲಿ ಗಲಭೆಕೋರರ ಅಸ್ತಿಗಳನ್ನು ನೆಲಸಮಗೊಳಿಸುವ ಕಾರ್ಯಾಚರಣೆಯಾಗಿತ್ತು ಎಂದು ಹೇಳಲಾಗುತ್ತಿದೆ. ಆದರೆ ಸುಪ್ರೀಮ್ ಕೋರ್ಟ್ ಮಧ್ಯೆ ಪ್ರವೇಶಿಸಿ ಕೂಡಲೇ ಕಾರ್ಯಾಚರಣೆ ನಿಲ್ಲಿಸುವಂತೆ ಆದೇಶ ನೀಡಿದ ಕಾರಣ ಅದನ್ನು ನಿಲ್ಲಿಸಲಾಗಿತ್ತು.

ಕಾರ್ಯಾಚರಣೆಗೆ ಮೊದಲು ಮತ್ತು ಅದು ನಡೆಯುವಾಗ ದೆಹಲಿ ವಾಯುವ್ಯ ವಿಭಾಗದ ಡೆಪ್ಯುಟಿ ಪೊಲೀಸ್ ಕಮೀಶನರ್ ಉಷಾ ರಂಗ್ನಾನಿ ಅವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು. ಉಷಾ ಅವರು ತಮ್ಮ ದಿಟ್ಟ ಕ್ರಮಗಳಿಂದಾಗಿ ಜನಪ್ರಿಯ ಪೊಲೀಸ್ ಅಧಿಕಾರಿ ಅನಿಸಿಕೊಂಡಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಅವರು ರಾಜಕೀಯ ಒತ್ತಡಗಳಿಗೆ ಮಣಿದವರಲ್ಲ.

ಗಲಭೆ ಜರುಗಿದ ಜಹಾಂಗೀರಪುರಿಯಲ್ಲಿ ಅನುಮತಿಯಲ್ಲಿ ಇಲ್ಲದೆ ಶೋಭಯಾತ್ರೆ ನಡೆಸಿದ ಕಾರಣಕ್ಕೆ ಉಷಾ ಅವರು ಸ್ಥಳೀಯ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸೇವಾ ಪ್ರಮುಖ್ ಪ್ರೇಮ್ ಶರ್ಮ ಅವರನ್ನು ಬಂಧಸಿ ವಿಹೆಚ್ ಪಿ ಮತ್ತು ದೆಹಲಿ ಪ್ರಾಂತ್ಯದ ಬಜರಂಗದಳ ಸಂಘಟನೆ ಗಳ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅವರ ಕ್ರಮವನ್ನು ಉತ್ತರ ಭಾರತದ ಮಾಧ್ಯಮಗಳಲ್ಲಿ ಶ್ಲಾಘಿಸಲಾಗುತ್ತಿದೆ.

 ಇದನ್ನೂ ಓದಿ:    ಜಹಾಂಗೀರ್‌ಪುರಿಯಲ್ಲಿ ಬುಲ್ಡೋಜರ್​​ನಿಂದ ಧ್ವಂಸ ಮಾಡುವ ಕಾರ್ಯಾಚರಣೆ ಸ್ಥಗಿತದ ನಂತರ ದೆಹಲಿ ಬಿಜೆಪಿ ನಾಯಕರಿಂದ ಅಮಿತ್ ಶಾ ಭೇಟಿ