ನೋಟು ಅಮಾನ್ಯೀಕರಣ ಮತ್ತು ಕೋವಿಡ್-19 ಕೋಟ್ಯಾಂತರ ಉದ್ಯೋಗಗಳನ್ನು ನಶಿಸಿಹಾಕಿವೆ: ಸಿದ್ದರಾಮಯ್ಯ

ನೋಟು ಅಮಾನ್ಯೀಕರಣ ಮತ್ತು ಕೋವಿಡ್-19 ಕೋಟ್ಯಾಂತರ ಉದ್ಯೋಗಗಳನ್ನು ನಶಿಸಿಹಾಕಿವೆ: ಸಿದ್ದರಾಮಯ್ಯ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 23, 2022 | 4:58 PM

2016 ರಲ್ಲಿ ನೋಟು ಅಮಾನ್ಯೀಕರಣ ಹಾಗೂ ಕೋವಿಡ್-19 ಪಿಡುಗಿನ ಎರಡು ವರ್ಷಗಳ ಅವಧಿಗಿಂತ ಮೊದಲು ಎಮ್ ಎಸ್ ಎಮ್ ಈ (MSME) ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಸುಮಾರು 11 ಕೋಟಿ ಜನ ಉದ್ಯೋಗಸ್ಥರಾಗಿದ್ದರು. ಅದರೆ ಪಿಡುಗಿನ ಬಳಿಕ ಆ ಸಂಖ್ಯೆ 2.5 ಕೋಟಿಗಿಳಿದಿದೆ ಎಂದು ಸಿದ್ದರಾಮಯ್ಯ ಹೇಳಿದರು.

ದಾವಣಗೆರೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು (Siddaramaiah) ಯಾವುದಾದರೂ ಒಂದು ವಿಷಯವನ್ನು ಪ್ರಸ್ತಾಪಿಸುವಾಗ ಅಂಕಿ-ಅಂಶಗಳಿಲ್ಲದೆ, ಪೂರಕ ದಾಖಲೆಗಳಿಲ್ಲದೆ ಮಾತಾಡುವುದಿಲ್ಲ. 75ರ ಪ್ರಾಯದಲ್ಲಿ ಅವರ ಜ್ಞಾಪಕ ಶಕ್ತಿಯೂ ಅಗಾಧವಾದದ್ದು. ಶನಿವಾರದಂದು ದಾವಣಗೆರೆಯ ಹರಿಹರ ತಾಲ್ಲೂಕಿನ ಹನಗವಾಡಿಯ ಪಂಚಮಸಾಲಿ ಗುರುಪೀಠದಲ್ಲಿ ನಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವ (Amrit Mahotsav) ಕಾರ್ಯಕ್ರಮನಲ್ಲಿ ಭಾಗವಹಿಸಿ ಮಾತಾಡಿದ ಸಿದ್ದರಾಮಯ್ಯನವರು ದೇಶದಲ್ಲಿ ತಾಂಡವಾಡುತ್ತಿರುವ ನಿರುದ್ಯೋಗ ಸಮಸ್ಯೆಯ (unemployment issue) ಬಗ್ಗೆಯೂ ಪ್ರಸ್ತಾಪ ಮಾಡಿದರು. ವಿದ್ಯಾವಂತ ಯುವಕ ಯುವತಿಯರಿಗೆ ಉದ್ಯೋಗಗಳನ್ನು ಸೃಷ್ಟಿ ಮಾಡುವುದು ಎಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ ಎಂದು ಅವರು ಹೇಳಿದರು. ಆದರೆ ಈಗಿನ ದಿನಗಳಲ್ಲಿ ಉದ್ಯೋಗದ ಅವಕಾಶಗಳು ನಶಿಸಿ ಹೋಗುತ್ತಿವೆ ಅಂತ ಸಿದ್ದರಾಮಯ್ಯನವರು ಅಂಕಿ-ಅಂಶಗಳ ಮೂಲಕ ಪ್ರಸ್ತಾಪಿಸಿದರು.

2016 ರಲ್ಲಿ ನೋಟು ಅಮಾನ್ಯೀಕರಣ ಹಾಗೂ ಕೋವಿಡ್-19 ಪಿಡುಗಿನ ಎರಡು ವರ್ಷಗಳ ಅವಧಿಗಿಂತ ಮೊದಲು ಎಮ್ ಎಸ್ ಎಮ್ ಈ (MSME) ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಸುಮಾರು 11 ಕೋಟಿ ಜನ ಉದ್ಯೋಗಸ್ಥರಾಗಿದ್ದರು. ಅದರೆ ಪಿಡುಗಿನ ಬಳಿಕ ಆ ಸಂಖ್ಯೆ 2.5 ಕೋಟಿಗಿಳಿದಿದೆ ಎಂದು ಸಿದ್ದರಾಮಯ್ಯ ಹೇಳಿದರು. ಕಳೆದ ಎರಡು ವರ್ಷಗಳಲ್ಲಿ ಒಬ್ಬೇಒಬ್ಬ ಉದ್ಯಮಿಯಾಗಲೀ, ಹೂಡಿಕೆದಾರನಾಗಲೀ ರಾಜ್ಯದ ಕಡೆ ತಿರುಗಿ ನೋಡಿಲ್ಲ ಎಂದು ವಿಪಕ್ಷ ನಾಯಕ ಹೇಳಿದರು.

ಪದವಿ ಓದಿರುವ ಯುವಕ ಯುವತಿಯರಿಗೆ ಉದ್ಯೋಗ ನೀಡದೆ ಹೋದರೆ ಅವರು ನಿರುಪಯುಕ್ತರಾಗುತ್ತಾರೆ ಮತ್ತು ದೇಶದ ಅಭಿವೃದ್ಧಿಗೆ ಅವರ ಕೊಡುಗೆ ಶೂನ್ಯವಾಗುತ್ತದೆ. ಅಂಥ ಸ್ಥಿತಿ ಉಂಟಾದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಉದ್ಯೋಗ ಸೃಷ್ಟಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಪ್ರಯತ್ನವಾಗಬೇಕು ಎಂದು ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ:    ಹೂಡಿಕೆದಾರರು ಬಂದು ಉದ್ದಿಮೆಗಳನ್ನು ಸ್ಥಾಪಿಸದ ಹೊರತು ಉದ್ಯೋಗಗಳು ಸೃಷ್ಟಿಯಾಗಲಾರವು: ಸಿದ್ದರಾಮಯ್ಯ