ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಕುಮಾರಸ್ವಾಮಿಯನ್ನು ಭೇಟಿಯಾದ ದೇವದುರ್ಗ ಜೆಡಿಎಸ್ ಶಾಸಕಿ ಕರಿಯಮ್ಮ ನಾಯಕ್

|

Updated on: Sep 01, 2023 | 12:39 PM

ತಾನು ಅವರನ್ನು ಭೇಟಿಯಾಗಲೇಬೇಕೆನ್ನುವುದು ದೇವದುರ್ಗ ಕ್ಷೇತ್ರದ ರೈತರ ಒತ್ತಾಸೆಯೂ ಆಗಿತ್ತು. ಬೆಂಗಳೂರಲ್ಲಿ ಶುಕ್ರವಾರ ಕಮಿಟಿ ಮೀಟಿಂಗ್ ಕೂಡ ಇದ್ದ ಕಾರಣ ಅದರಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಅಣ್ಣನವರನ್ನು ಮತಾಡಿಸುವುದು ಸಾಧ್ಯವಾಗುತ್ತದೆ ಅಂತ ಆಗಮಿಸಿರುವುದಾಗಿ ಕರಿಯಮ್ಮ ಹೇಳಿದರು.   

ಬೆಂಗಳೂರು: ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯವರಿಗೆ (HD Kumaraswamy) ಜಯನಗರದ ಅಪೊಲ್ಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದ್ದಂತೆಯೇ ರಾಜಕೀಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಸುತ್ತಿದ್ದಾರೆ. ನಿನ್ನೆ ಸಾಯಂಕಾಲ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮಾಜಿ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದರು. ಇಂದು ಬೆಳಗ್ಗೆ ದೇವದುರ್ಗದ ಜೆಡಿಎಸ್ ಶಾಸಕಿ ಕರಿಯಮ್ಮ ನಾಯಕ್ (Kariyamma Nayak) ತಮ್ಮ ಪಕ್ಷದ ಶಾಸಕಾಂಗ ನಾಯಕನನ್ನು ಭೇಟಿಯಾಗಿ ಮಾತಾಡಿಸಿದರು. ಹೊರಬಂದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕರಿಯಮ್ಮ, ಕುಮಾರಣ್ಣನವರ ಆರೋಗ್ಯ ಚೆನ್ನಾಗಿದೆ, ಆತಂಕಪಡುವ ಅವಶ್ಯಕತೆಯಿಲ್ಲ ಎಂದು ಹೇಳಿದರು. ತಾನು ಅವರನ್ನು ಭೇಟಿಯಾಗಲೇಬೇಕೆನ್ನುವುದು ದೇವದುರ್ಗ ಕ್ಷೇತ್ರದ ರೈತರ ಒತ್ತಾಸೆಯೂ ಆಗಿತ್ತು. ಬೆಂಗಳೂರಲ್ಲಿ ಶುಕ್ರವಾರ ಕಮಿಟಿ ಮೀಟಿಂಗ್ ಕೂಡ ಇದ್ದ ಕಾರಣ ಅದರಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಅಣ್ಣನವರನ್ನು ಮತಾಡಿಸುವುದು ಸಾಧ್ಯವಾಗುತ್ತದೆ ಅಂತ ಆಗಮಿಸಿರುವುದಾಗಿ ಕರಿಯಮ್ಮ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ