Dy CM holds meeting: ಬೆಂಗಳೂರಿನ ಮಾಜಿ ಮೇಯರ್ ಗಳೊಂದಿಗೆ ಸಭೆ ನಡೆಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

Dy CM holds meeting: ಬೆಂಗಳೂರಿನ ಮಾಜಿ ಮೇಯರ್ ಗಳೊಂದಿಗೆ ಸಭೆ ನಡೆಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 01, 2023 | 4:28 PM

ಮಳೆಗಾಲ ಹೆಚ್ಚುಕಡಿಮೆ ಆರಂಭವಾಗಿರುವುದರಿಂದ ನಗರದಲ್ಲಿ ಅನಾಹುತಗಳು ಸಂಭವಿಸದಂತೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆಯೂ ಅವರು ವಿಚಾರ-ವಿಮರ್ಶೆ ನಡೆಸಿರುತ್ತಾರೆ.

ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಪ್ರಾಯಶಃ ಉಳಿದವರಿಗಿಂತ ಹೆಚ್ಚು ಕ್ರಿಯಾಶೀಲರಾಗಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವರೂ (Bengaluru Development Minister) ಆಗಿರುವ ಶಿವಕುಮಾರ್ ಇಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಗಳು (mayors) ಮತ್ತು ಇತರ ಕೆಲ ನಾಯಕರೊಂದಿಗೆ ಸಭೆ ನಡೆಸಿದರು. ಪಾಲಿಕೆ ಚುನಾವಣೆಯನ್ನು ಇಷ್ಟರಲ್ಲೇ ಘೋಷಿಸುವ ಸಾಧ್ಯತೆ ಇದೆ ಮತ್ತು ಶಿವಕುಮಾರ್ ಈ ಅಂಶದ ಮೇಲೆ ಮಾಜಿ ಮೇಯರ್ಗಳೊಂದಿಗೆ ಚರ್ಚೆ ನಡೆಸಿರಬಹುದಾಗಿದೆ. ಹಾಗೆಯೇ, ಮಳೆಗಾಲ ಹೆಚ್ಚುಕಡಿಮೆ ಆರಂಭವಾಗಿರುವುದರಿಂದ ನಗರದಲ್ಲಿ ಅನಾಹುತಗಳು ಸಂಭವಿಸದಂತೆ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆಯೂ ಅವರು ವಿಚಾರ-ವಿಮರ್ಶೆ ನಡೆಸಿರುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ