CM Siddaramaiah; ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಅಡಚಣೆಯಿಲ್ಲದೆ ಲಭ್ಯವಾಗಿಸುವಂತೆ ಡಿಸಿಗಳಿಗೆ ಸೂಚಿಸಲಾಗಿದೆ: ಸಿದ್ದರಾಮಯ್ಯ, ಮುಖ್ಯಮಂತ್ರಿ
ಪ್ರವಾಹದಂಥ ಪರಿಸ್ಥಿತಿ ತಲೆದೋರಿದರೆ, ಅದನ್ನು ಎದುರಿಸಲು ಸನ್ನದ್ಧರಾಗಿರುವಂತೆಯೂ ಎಲ್ಲ ಡಿಸಿಗಳಿಗೆ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ದಾವಣಗೆರೆ: ರಾಜ್ಯದೆಲ್ಲೆಡೆ ಕೃಷಿ ಚಟಿವಟಿಕೆಗಳು ಆರಂಭವಾಗಿರುವುದರಿಂದ ರೈತಾಪಿ ಜನರಿಗೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕೀಟನಾಶಕಗಳು (pesticides) ಯಾವುದೇ ಅಡಚಣೆಯಿಲ್ಲದೆ ಲಭ್ಯವಾಗುವಂತೆ ನೋಡಿಕೊಳ್ಳಲು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ (deputy commissioners) ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಇಂದು ದಾವಣಗೆರೆಯಲ್ಲಿ ಹೇಳಿದರು. ಹಾಗೆಯೇ, ಮಳೆಗಾಲದಲ್ಲಿ ಪ್ರವಾಹಗಳು ಉಂಟಾಗುವ ಭೀತಿ ಇರೋದ್ರಿಂದ ಹಾಗಾಗದಂತೆ ಪ್ರಾರ್ಥಿಸೋಣ ಆದರೆ ಒಂದು ಪಕ್ಷ ಅಂಥ ಪರಿಸ್ಥಿತಿ ತಲೆದೋರಿದರೆ, ಅದನ್ನು ಎದುರಿಸಲು ಸನ್ನದ್ಧರಾಗಿರುವಂತೆಯೂ ಎಲ್ಲ ಡಿಸಿಗಳಿಗೆ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ