Unprecedented Dedication: ಆರ್ಚರ್ ಪೂಜಾ ಕುಮಾರಿ 9-ತಿಂಗಳು ಗರ್ಭಿಣಿಯಾಗಿದ್ದರೂ ಉದಯೋನ್ಮುಖ ಪ್ರತಿಭೆಗಳನ್ನು ಕೋಚ್ ಮಾಡುತ್ತಿದ್ದಾರೆ!

Unprecedented Dedication: ಆರ್ಚರ್ ಪೂಜಾ ಕುಮಾರಿ 9-ತಿಂಗಳು ಗರ್ಭಿಣಿಯಾಗಿದ್ದರೂ ಉದಯೋನ್ಮುಖ ಪ್ರತಿಭೆಗಳನ್ನು ಕೋಚ್ ಮಾಡುತ್ತಿದ್ದಾರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on:Apr 05, 2023 | 6:16 PM

ಪೂಜಾ ಅವರ ಬಿಲ್ಲುಗಾರಿಕೆ ಪಯಣ ಆಸಕ್ತಿದಾಯಕವಾಗಿರುವಷ್ಟೇ ಅವರ ವೈವಾಹಿಕ ಜೀವನವೂ ಕುತೂಹಲಭರಿತವಾಗಿದೆ.

ಆರ್ಹಾ (ಬಿಹಾರ):  ಬದ್ಧತೆ ಅಂದರೆ ಇದು! ಆರ್ಚರಿ (ಬಿಲ್ಲುಗಾರಿಕೆ) (Archery) ಕೋಚ್ ಪೂಜಾ ಕುಮಾರಿಯ (Pooja Kumari) ಬದ್ಧತೆಗೆ ನಿಜಕ್ಕೂ ಸಾಟಿಯಿಲ್ಲ ಮಾರಾಯ್ರೇ. 9-ತಿಂಗಳು ಗರ್ಭಿಣಿಯಾದರೂ ಅವರು ತಮ್ಮ ಹೆಚ್ಚಿನ ಸಮಯವನ್ನು ಆರ್ಚರಿಯಲ್ಲಿ ಹೆಸರು ಮಾಡಬಯಸುವ ಯುವತಿಯರಿಗೆ ಕೋಚ್ (coach) ಮಾಡುವುದರಲ್ಲಿ ಕಳೆಯುತ್ತಾರೆ. ಪೂಜಾ, ತಮ್ಮ ಗರ್ಭಾವಸ್ಥೆಯ 4ನೇ ಮತ್ತು 8ನೇ ತಿಂಗಳಲ್ಲೂ ಬಿಲ್ಲುಗಾರಿಕೆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.

‘ಈ ಸಮಯದಲ್ಲಿ ಮಹಿಳೆಯರು ಹೆಚ್ಚು ಕೆಲಸ ಮಾಡಬಾರದು ಅಂತ ಎಲ್ಲರೂ ಹೇಳುತ್ತಾರೆ. ಆದರೆ ಗರ್ಭ ಧರಿಸಿದ ನಂತರ ಆಕೆ ಎರಡು ಬಾರಿ ರಾಷ್ಟ್ರೀಯ ಕ್ರೀಡೆಗಳಲ್ಲಿ ಭಾಗವಹಿಸಿದ್ದಾಳೆ. ಗರ್ಭಾವಸ್ಥೆಯ ಆರಂಭ ಮತ್ತು ಅಂತಿಮ ತಿಂಗಳುಗಳಲ್ಲಿ ಶ್ರಮದಾಯಕ ಕೆಲಸಗಳಲ್ಲಿ ತೊಡಗಬಾರದೆಂದು ವೈದ್ಯರು ಸಲಹೆ ನೀಡಿದಾಗ್ಯೂ ಪೂಜಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದಾಳೆ,’ ಎಂದು ಖುದ್ದು ಒಬ್ಬ ಆರ್ಚರಿ ಕೋಚ್ ಆಗಿರುವ ಪೂಜಾ ಅವರ ಪತಿ ನೀರಜ್ ಕುಮಾರ್ ಸಿಂಗ್ ಹೇಳುತ್ತಾರೆ.

ಇದನ್ನೂ ಓದಿ: Stormy Daniels: ಮಾನನಷ್ಟ ಪ್ರಕರಣದಲ್ಲಿ ಸ್ಟಾರ್ಮಿ ಡೇನಿಯಲ್ಸ್​​ಗೆ ಮುಖಭಂಗ; ಡೊನಾಲ್ಡ್ ಟ್ರಂಪ್ ಕಾನೂನು ಶುಲ್ಕ ಪಾವತಿಸಲು ನೀಲಿಚಿತ್ರ ತಾರೆಗೆ ಕೋರ್ಟ್ ಆದೇಶ

ಪೂಜಾ ಅವರ ಬಿಲ್ಲುಗಾರಿಕೆ ಪಯಣ ಆಸಕ್ತಿದಾಯಕವಾಗಿರುವಷ್ಟೇ ಅವರ ವೈವಾಹಿಕ ಜೀವನವೂ ಕುತೂಹಲಭರಿತವಾಗಿದೆ.
‘ತರಬೇತಿಗಾಗಿ ಸ್ಟೇಡಿಯಂಗೆ ಬಂದಾಗ ನಾನು ಅವರನ್ನು ಮೊದಲಬಾರಿ ಭೇಟಿಯಾಗಿದ್ದೆ. ಅವರೇ ನನಗೆ ತರಬೇತಿ ನೀಡಿದ್ದು, 2013 ರಿಂದ ತರಬೇತಿ ಪಡೆಯುತ್ತಿದ್ದೇನೆ,’ ಎಂದು ಪೂಜಾ ಕುಮಾರಿ ಹೇಳುತ್ತಾರೆ.

‘ತರಬೇತಿಯ ಅವಧಿ ಚೆನ್ನಾಗಿತ್ತು ಜೊತೆಗೆ ಕಷ್ಟಗಳನ್ನು ಎದುರಿಸಬೇಕಾಯಿತು, ಆದರೆ ನನ್ನ ಪತಿ ನನಗೆ ಬೆಂಗಾವಲಾಗಿ ನಿಂತರು. ಇದಕ್ಕೂ ಮೊದಲು ನಾನು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಗುಜರಾತ್ ಗೆ ಹೋಗಿದ್ದೆ. ಆಗಲೂ ನನ್ನ ಆರೋಗ್ಯ ಸ್ಥಿತಿ ಚೆನ್ನಾಗಿರಲಿಲ್ಲ. ಆದರೆ ಪತಿಯ ಬೆಂಬಲದ ಕಾರಣ ನಾನು ಉತ್ತಮ ಪ್ರದರ್ಶನ ನೀಡಿದೆ. ಅವರು ನನ್ನೊಂದಿಗಿದ್ದು ಸಪೋರ್ಟ್ ಮಾಡಿದ್ದರಿಂದಲೇ ಅದು ಸಾಧ್ಯವಾಯಿತು,’ ಎಂದು ಪೂಜಾ ಹೇಳುತ್ತಾರೆ.

ಬಿಹಾರ ಬೋಜ್ಪುರ್ ಜಿಲ್ಲೆಯ ಆರ್ಹಾದಲ್ಲಿರುವ ಕಂವರ್ ಸಿಂಗ್ ಸ್ಟೇಡಿಯಂನಲ್ಲಿ ಪೂಜಾ ಮತ್ತು ಅವರ ಪತಿ ಉದಯೋನ್ನುಖ ಪ್ರತಿಭೆಗಳಿಗೆ ಕೋಚಿಂಗ್ ನೀಡುತ್ತಾರೆ. ಅವರ ತರಬೇತಿಯ ಫಲವಾಗಿಯೇ ಅಲ್ಲಿಗೆ ಬರುವ ಅನೇಕ ಯುವತಿಯರು ರಾಜ್ಯ ಮತ್ತು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸುತ್ತಿದ್ದಾರೆ.

ಇದನ್ನೂ ಓದಿ: Let There Be Sports: ಕ್ರೀಡೆ ಮಕ್ಕಳ ಬೆಳವಣಿಗೆಯ ಪ್ರಮುಖ ಭಾಗವಾಗಿಸಲು ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಮತ್ತು ಅದ್ವಿತೀಯ ಪುಟ್ಬಾಲರ್ ಸುನೀಲ್ ಛೆತ್ರಿ ಆಗ್ರಹ

‘ನಮ್ಮಿಬ್ಬರ ಕ್ಷೇತ್ರ ಒಂದೇ ಆಗಿದೆ, ಹಾಗಾಗಿ ಪ್ರತಿಯೊಂದು ವಿಷಯದಲ್ಲಿ ನಾವು ಪರಸ್ಪರ ಸಪೋರ್ಟ್ ಮಾಡಿಕೊಳ್ಳುತ್ತೇವೆ. ಉದಾಹರಣೆಗೆ ಹೇಳಬೇಕೆಂದರೆ ಯುವತಿಯರಿಗೆ ನನ್ನಲ್ಲಿ ಹೇಳಿಕೊಳ್ಳಲಾಗದ ಸಮಸ್ಯೆಗಳಿರುತ್ತವೆ. ಪೂಜಾ ನನ್ನೊಂದಿಗಿರುವುದರಿಂದ ಅವರ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸಿಗುತ್ತದೆ, ಅದು ನನಗೆ ಬಹಳ ರೀತಿಯಲ್ಲಿ ಸಹಕಾರಿಯಾಗುತ್ತದೆ,’ ಎಂದು ನೀರಜ್ ಕುಮಾರ್ ಹೇಳುತ್ತಾರೆ.

ಆರ್ಚರಿ ಒಂದು ದುಬಾರಿ ಕ್ರೀಡೆಯಾಗಿರುವುದರಿಂದ ಯುವತಿಯರಿಗೆ ವಿಶೇಷವಾಗಿ ಸ್ಪರ್ಧಾತ್ಮಕ ಹಂತಗಳಲ್ಲಿ ಸಂಪನ್ಮೂಲಗಳ ಕೊರತೆಯಿದೆ. ಆದರೆ ಪೂಜಾ ಧೃತಿಗೆಟ್ಟಿಲ್ಲ. ಅವರು ಸಾಟಿಯಿಲ್ಲದ ಬದ್ಧತೆ ಮತ್ತು ಸಂಕಲ್ಪದೊಂದಿಗೆ ತಮ್ಮನ್ನು ಕ್ರೀಡೆಯಲ್ಲಿ ತೊಡಗಿಸಿಕೊಂಡುರುವುದರ ಜೊತೆಗೆ ಉದಯೋನ್ಮುಖ ಪ್ರತಿಭೆಗಳಿಗೆ ತರಬೇತಿ ನೀಡುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Apr 05, 2023 06:16 PM