Union Budget 2024; ಕನ್ನಡನಾಡಿಂದ ರಾಜ್ಯಸಭೆ ಹೋಗಿರುವ ನಿರ್ಮಲಾ ಸೀತಾರಾಮನ್ ಗೆ ಕನ್ನಡಿಗರ ಋಣ ತೀರಿಸುವ ಯೋಚನೆ ಬಂದಿಲ್ಲ: ವಾಟಾಳ್ ನಾಗರಾಜ್

|

Updated on: Jul 23, 2024 | 5:42 PM

ಕೇವಲ ನಿರ್ಮಲಾ ಸೀತಾರಾಮನ್ ಮಾತ್ರವಲ್ಲ, ಕರ್ನಾಟಕದಿಂದ ಸಂಸತ್ತಿಗೆ ಆಯ್ಕೆಯಾಗಿರುವ ಸಂಸದರು, ಮಂತ್ರಿಗಳಾಗಿರುವವರು ಮತ್ತು ಬಿಜೆಪಿಯೊಂದಿಗೆ ಮೈತ್ರಿ ಬೆಳೆಸಿ ಕೇಂದ್ರದಲ್ಲಿ ಸಚಿವ ಕೂಡ ಆಗಿರುವ ಹೆಚ್ ಡಿ ಕುಮಾರಸ್ವಾಮಿ ಕೂಡ ರಾಜೀನಾಮೆ ಸಲ್ಲಿಸಬೇಕು ಎಂದ ವಾಟಾಳ್ ನಾಗರಾಜ್ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಹೇಳಿದರು.

ಬೆಂಗಳೂರು: ಕನ್ನಡಿಗರ ಮತ ಪಡೆದು, ರಾಜ್ಯಸಭೆ ಆಯ್ಕೆಯಾಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇವತ್ತು ಮಂಡಿಸಿದ ಬಜೆಟ್ ನಲ್ಲಿ ಕರ್ನಾಟಕವನ್ನೇ ಮರೆತುಬಿಟ್ಟಿದ್ದಾರೆ, ರಾಜ್ಯಕ್ಕೆ ಮೂರು ಕಾಸನ್ನೂ ಮೀಸಲಿಡದೆ ಅವರು ಕನ್ನಡಿಗರಿಗೆ ಮೋಸ ಮಾಡಿದ್ದಾರೆ, ಹಾಗಾಗಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದರು. ನಗರದಲ್ಲಿಂದು ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಅಂಧ್ರ ಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ಕೊಡುಗೈ ದಾನಿಯ ಹಾಗೆ ಅನುದಾನ ಮತ್ತು ಯೋಜನೆಗಳನ್ನು ನೀಡಿದ್ದಾರೆ, ಆದರೆ ತಮ್ಮನ್ನು ಪದೇ ಪದೇ ರಾಜ್ಯಸಭೆಗೆ ಆರಿಸಿ ಕಳಿಸುವ ಕರ್ನಾಟಕದ ಋಣ ತೀರಿಸುವ ಯೋಚನೆ ಅವರಿಗೆ ಬರಲಿಲ್ಲ. ಕೇವಲ ಕೇಂದ್ರದಲ್ಲಿ ತಮ್ಮ ಸರ್ಕಾರ ಉಳಿಸಿಕೊಳ್ಳಲು ಆಂಧ್ರ ಮತ್ತು ಬಿಹಾರ ರಾಜ್ಯಗಳಿಗೆ ಕೊಪ್ಪರಿಗೆ ತುಂಬುವಷ್ಟು ನೀಡಿದ್ದಾರೆ ಎಂದು ಅವರು ಹೇಳಿದರು. ದೇಶವೆಂದರೆ ಕೇವಲ ಅವೆರಡೇ ರಾಜ್ಯಗಳಲ್ಲ ಕರ್ನಾಟಕ ಕೂಡ ಈ ದೇಶದ ಭಾಗ ಅನ್ನೋದನ್ನು ಮರೆತಂತಿರುವ ನಿರ್ಮಲಾ ಸೀತಾರಾಮನ್ ಗೌರವಯುತವಾಗಿ ರಾಜೀನಾಮೆ ನೀಡಬೇಕು ಎಂದು ವಾಟಾಳ್ ನಾಗರಾಜ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Budget 2024: ಬಜೆಟ್‌ನಲ್ಲಿ ಮೋದಿ ಸರ್ಕಾರದ 9 ಆದ್ಯತೆಗಳು, 4 ಸ್ತಂಭಗಳನ್ನು ಪಟ್ಟಿ ಮಾಡಿದ ಸಚಿವೆ ನಿರ್ಮಲಾ ಸೀತಾರಾಮನ್

Follow us on