ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚಂದ ಎಂದ ಡಿಸಿಎಂ ಡಿಕೆ ಶಿವಕುಮಾರ್

|

Updated on: Oct 24, 2024 | 4:12 PM

ಚನ್ನಪಟ್ಟಣದಿಂದ ಎರಡು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದ ಮತ್ತು ಮುಖ್ಯಮಂತ್ರಿ ಕೂಡ ಆಗಿದ್ದ ಹೆಚ್ ಡಿ ಕುಮಾರಸ್ವಾಮಿಯವರು ಕ್ಷೇತ್ರಕ್ಕೆ ನೀಡಿರುವ ಕೊಡುಗೆಯೇನು ಅಂತ ಕೇಳುವಂತೆ ಶಿವಕುಮಾರ್ ಜನರನ್ನು ಆಗ್ರಹಿಸಿದರು. ಅವರು ಕೇವಲ ಸ್ವಾರ್ಥ ರಾಜಕಾರಣ ಮಾಡುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ರಾಮನಗರ: ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಗಾಗಿ ಸಿಪಿ ಯೋಗೇಶ್ವರ್ ನಾಮಪತ್ರ ಸಲ್ಲಿಸುವ ಮೊದಲು ಮಾತಾಡಿದ ಡಿಕೆ ಶಿವಕುಮಾರ್ ನೆರೆದಿದ್ದ ಜನರಿಗೆ ರಾಜಕಾರಣಿಗಿಂತ ಹೆಚ್ಚು ಕವಿಯಾಗಿ ಕಂಡರು! ಕಮಲ ಕೆರೆಯಲ್ಲಿದ್ದರೆ ಚಂದ, ಎಲೆ ಹೊಲದಲ್ಲಿದ್ದರೆ ಚಂದ ಹಾಗೆಯೇ, ದಾನ ಧರ್ಮ ಮಾಡುವ ಕೈ ಆಧಿಕಾರದಲ್ಲಿದ್ದರೆ ಚಂದ ಅಂತ ಹೇಳಿ ಚನ್ನಪಟ್ಟಣದ ಸಮಗ್ರ ಅಭಿವೃದ್ಧಿ ಆಗಬೇಕಾದರೆ ಕಾಂಗ್ರೆಸ್ ಪಕ್ಷದ ಯೋಗೇಶ್ವರ್ ಶಾಸಕನಾಗಬೇಕು ಎಂದರು. ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ₹500 ಕೋಟಿ ಬಿಡುಗಡೆ ಮಾಡಿಸಿರುವುದಾಗಿ ಶಿವಕುಮಾರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಶಿವಕುಮಾರ್​ರೊಂದಿಗೆ ವೈರತ್ವ ರಾಜಕೀಯಕ್ಕೆ ಮಾತ್ರ ಸೀಮಿತವಾಗಿತ್ತು: ಸಿಪಿ ಯೋಗೇಶ್ವರ್

Published on: Oct 24, 2024 02:23 PM