ಶರತ್ ದಾರುಣ ಸಾವು ಕಣ್ಮುಂದಿದ್ದರೂ ವಿವೇಕ ಪ್ರದರ್ಶಿಸಿದ ಜನ, ಕಲ್ಲತ್ತಗಿರಿ ಜಲಪಾತದಲ್ಲಿ ಹಿರಿಕಿರಿಯರಿಂದ ಹುಚ್ಚಾಟ!
ವಯಸ್ಸಿನಲ್ಲಿ ಹಿರಿಯರಾಗಿರುವ ಮಹಿಳೆಯೊಬ್ಬರು, ಹುಚ್ಚಾಟ ನಡೆಸುತ್ತಿರುವ ಯುವಕರಿಗೆ ತಿಳಿ ಹೇಳುವ ಬದಲು ತಾವೇ ಪ್ರಾಣದ ಹಂಗು ತೊರೆದು ಜಲಪಾತದ ಮಧ್ಯಭಾಗಕ್ಕೆ ಹೋಗುವ ಪ್ರಯತ್ನ ಮಾಡುತ್ತಿದ್ದಾರೆ!
ಚಿಕ್ಕಮಗಳೂರು: ಇದು ಮೂರ್ಖತನ, ಹುಚ್ಚುತನ ಮತ್ತು ಬೇಜವಾಬ್ದಾರಿಯ ಪರಮಾವಧಿ ಅಂದರೆ ತಪ್ಪಲ್ಲ. ಮೊನ್ನೆಯಷ್ಟೇ ಉಡುಪಿಯ ಅರಿಶಿನಗುಂಡಿ ಫಾಲ್ಸ್ ನಲ್ಲಿ (Arishinagundi Falls) ದೊಡ್ಡ ದುರಂತ ನಡೆದಿದೆ. ಹುಚ್ಚು ಸಾಹಸ ಮಾಡಲು ಹೋಗಿ ಜಲಪಾತದಲ್ಲಿ ಜಾರಿಬಿದ್ದ ಭದ್ರಾವತಿ ಯುವಕ ಶರತ್ (Sharat) ಮೃತದೇಹ ನಿನ್ನೆ ಸಿಕ್ಕಿದೆ. ಆದರೆ, ಜಿಲ್ಲೆಯ ತರೀಕೆರೆ ತಾಲ್ಲೂಕಿನ ಕಲ್ಲತ್ತಗಿರಿ ಫಾಲ್ಸ್ (Kallathigiri Falls) ನೋಡಲು ಬಂದಿರುವ ಪ್ರವಾಸಿಗರಿಗೆ ಶರತ್ ದಾರುಣ ಸಾವಿನ ಬಗ್ಗೆ ಪರಿವೆಯೇ ಇಲ್ಲ. ಧುಮ್ಮುಕ್ಕಿತ್ತರುವ ಜಲಪಾತದಲ್ಲಿ ಹುಚ್ಚು ಸಾಹಸಗಳನ್ನು ಮಾಡುತ್ತಿದ್ದಾರೆ. ಒಬ್ಬ ಪ್ರಾಯಶ: ಅವನ ಹೆಂಡತಿಯಿರಬಹುದು-ಜೊತೆ ನಿಂತು ಫೋಟೋಗೆ ಪೋಸ್ ನೀಡುತ್ತಿದ್ದಾನೆ. ಕೆಂಪು ಶರ್ಟ್ ಧರಿಸಿರುವ ವ್ಯಕ್ತಿಯೊಬ್ಬ ಮಗವನ್ನು ಎತ್ತಿಕೊಂಡು ನೀರು ಹರಿಯುತ್ತಿರುವ ಬಂಡೆಯೊಂದರ ಮೇಲೆ ನಿಂತಿದ್ದಾನೆ. ಮೇಲ್ಭಾಗದಲ್ಲಿ ಮಹಿಳೆಯೊಬ್ಬರಿದ್ದಾರೆ, ಅಸಲಿಗೆ ಅವರು ಈ ಮೂರ್ಖರಿಗೆ ಹುಚ್ಚಾಟ ಬೇಡ ಅಂತ ಬುದ್ಧಿ ಹೇಳಬೇಕಿತ್ತು. ಆದರೆ, ಅವರೇ ಜೀವವನ್ನು ಪಣಕ್ಕೊಡ್ಡಿ ಜಲಪಾತದ ಮಧ್ಯಭಾಗಕ್ಕೆ ಬರುವ ಪ್ರಯತ್ನ ಮಾಡುತ್ತಿದ್ದಾರೆ. ಇಂಥ ಮೂರ್ಖರಿಗೆಲ್ಲ ದೇವರು ಬುದ್ಧಿ ನೀಡಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ