Udupi News: ಅರಶಿನಗುಂಡಿ ಜಲಪಾತಕ್ಕೆ ಬಿದ್ದಿದ್ದ ಶರತ್ ಶವ 1 ವಾರದ ಬಳಿಕ ಪತ್ತೆ
ಉಡುಪಿಯ ಅರಶಿನಗುಂಡಿ ಜಲಪಾತದಲ್ಲಿ ಕೊಚ್ಚಿ ಹೋಗಿದ್ದ ಭದ್ರಾವತಿ ಮೂಲದ ಶರತ್ ಶವ ಕೊನೆಗೂ ಒಂದು ವಾರದ ಬಳಿಕ ಪತ್ತೆಯಾಗಿದೆ.
ಉಡುಪಿ, (ಜುಲೈ 30): ಉಡುಪಿಯ(Udupi) ಅರಶಿನಗುಂಡಿ ಜಲಪಾತದಲ್ಲಿ (Arsinagundi Falls) ಕೊಚ್ಚಿ ಹೋಗಿದ್ದ ಭದ್ರಾವತಿ ಮೂಲದ ಶರತ್ ಶವ ಕೊನೆಗೂ ಪತ್ತೆಯಾಗಿದೆ. ಕೊಲ್ಲೂರು ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಸತತ ಕಾರ್ಯಾಚರಣೆಯಿಂದಾಗಿ ಬರೋಬ್ಬರಿ ಒಂದು ವಾರದ ಬಳಿಕ ಶರತ್ ಮೃತದೇಹ ಇಂದು (ಜುಲೈ 30) ಪತ್ತೆಯಾಗಿದೆ. ಜುಲೈ 24ರಂದು ಶರತ್ ಅರಶಿನಗುಂಡಿ ಜಲಪಾತದ ಬಂಡೆಗಲ್ಲಿನ ಮೇಲಿಂದ ಕಾಲು ಜಾರಿ ನೀರಿಗೆ ಬಿದ್ದಿದ್ದ. ಎಷ್ಟು ಕಾರ್ಯಚರಣೆ ನಡೆಸಿದ್ದರೂ ಶರತ್ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ಸತತ ಕಾರ್ಯಚರಣೆಯಿಂದ 200 ಮೀಟರ್ ಕೆಳಗಡೆ ಬಂಡೆಗಲ್ಲಿನ ಒಳಗಡೆ ಸಿಲುಕಿ ಹಾಕಿಕೊಂಡಿದ್ದ ಶರತ್ ಮೃತದೇಹ ಪತ್ತೆಯಾಗಿದ್ದು, ಇದೀಗ ಮೃತದೇಹವನ್ನು ಮೇಲಕ್ಕೆತ್ತಲಾಗಿದೆ.
ಮಂಗಳೂರಿನ ಎಸ್ಡಿಆರ್ಎಫ್ ತಂಡದ ಹತ್ತು ಸಿಬ್ಬಂದಿ, ಕುಂದಾಪುರ ಅಗ್ನಿಶಾಮಕ ದಳದ ಓರ್ವ ಸಿಬ್ಬಂದಿ ಮತ್ತು ಬೈಂದೂರು ಅಗ್ನಿಶಾಮಕ ತಂಡ, ಜ್ಯೋತಿರಾಜ್ ತಂಡ, ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಸಹ ಶೋಧ ಕಾರ್ಯ ನಡೆಸಿತ್ತು.ಆದ್ರೆ, ಅಂತಿಮವಾಗಿ ಬರೋಬ್ಬರಿ ಒಂದು ವಾರದ ಬಳಿಕ ಇಂದು(ಜುಲೈ 30 ಶರತ್ ಶವ ಸಿಕ್ಕಿದೆ.
ಭದ್ರಾವತಿ ಮೂಲದ ಶರತ್ ಸ್ನೇಹಿತರೊಂದಿಗೆ ನಿನ್ನೆ(ಜುಲೈ 24) ಕೊಲ್ಲೂರು ಬಳಿ ಇರುವ ಅರಶಿನಗುಂಡಿ ಜಲಪಾತ ನೋಡಲು ಬಂದಿದ್ದು, ಈ ವೇಳೆ ಬಂಡೆಗಳ ಮೇಲೆ ನಿಂತು ರೀಲ್ಸ್ ಮಾಡುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದ. ಸ್ಥಳಕ್ಕೆ ಮುಳುಗು ತಜ್ಞರು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಯುವಕ ಪತ್ತೆಗೆ ಕಾರ್ಚರಣೆ ನಡೆಸಿದ್ದರು. ಕೊನೆಗೆ ಬರೋಬ್ಬರಿ ಒಂದು ವಾರದ ಬಳಿಕ ಶರತ್ ಮೃತದೇಹ ಪತ್ತೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ