Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಡುಪಿ ಕಾಲೇಜಿಗೆ ಖುಷ್ಬೂ ಜತೆ ಬಂದ ವಕೀಲೆ ಬಗ್ಗೆ ಬಿಜೆಪಿ ಆಕ್ಷೇಪ, ಮಹಿಳಾ ಕಾಂಗ್ರೆಸ್ ತಿರುಗೇಟು

ಖುಷ್ಬೂ ಅವರ ಕಾಲೇಜು ಭೇಟಿಯ ವೇಳೆ ಜೊತೆಗಿದ್ದ ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ಆಸ್ಕರ್ ಫೆರ್ನಾಂಡಿಸ್ ನಿಕಟ ಬಂಧು ಮೇರಿ ಶ್ರೇಷ್ಠ ಬಗ್ಗೆ ಬಿಜೆಪಿ ಅಕ್ಷೇಪ ವ್ಯಕ್ತಪಡಿಸಿದೆ.

ಉಡುಪಿ ಕಾಲೇಜಿಗೆ ಖುಷ್ಬೂ ಜತೆ ಬಂದ ವಕೀಲೆ ಬಗ್ಗೆ ಬಿಜೆಪಿ ಆಕ್ಷೇಪ, ಮಹಿಳಾ ಕಾಂಗ್ರೆಸ್ ತಿರುಗೇಟು
ಕಾಂಗ್ರೆಸ್ ನಾಯಕಿ ಡಾ. ಸುನಿತಾ ಶೆಟ್ಟಿ
Follow us
ಪ್ರಜ್ವಲ್ ಅಮೀನ್​, ಉಡುಪಿ
| Updated By: ಆಯೇಷಾ ಬಾನು

Updated on: Jul 30, 2023 | 10:15 AM

ಉಡುಪಿ, ಜುಲೈ 30: ಉಡುಪಿ ಕಾಲೇಜಿನ ವಿಡಿಯೋ ವಿವಾದಕ್ಕೆ(Udupi College Video Issue) ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಗಳಾಗುತ್ತಿವೆ. ತನಿಕಾ ಅಧಿಕಾರಿ ಬದಲಾಗಿದ್ದಾರೆ. ಆದ್ರೆ ಜುಲೈ 27 ರ ಗುರುವಾರ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್(Khushboo Sundar) ಅವರ ಜೊತೆ ಕಾಲೇಜಿಗೆ ಭೇಟಿ ನೀಡಿದ ತಂಡದ ಬಗ್ಗೆ ಬಿಜೆಪಿಯಲ್ಲೇ ಆಕ್ಷೇಪ ವ್ಯಕ್ತವಾಗಿದೆ. ಖುಷ್ಬೂ ಅವರ ಭೇಟಿಯ ಬಗ್ಗೆ ಬಿಜೆಪಿಯಲ್ಲೇ(BJP) ಅಸಮಾಧಾನ ಭುಗಿಲೆದ್ದಿದೆ. ಖುಷ್ಬೂ ಅವರ ಜೊತೆಗೆ ಮೇರಿ ಶ್ರೇಷ್ಠ ಅವರು ಇದದ್ದು ಬಿಜೆಪಿ ಆಕ್ಷೇಪಕ್ಕೆ ಕಾರಣವಾಗಿದೆ. ಈ ಸಂಬಂಧ ಬಿಜೆಪಿ ಆರೋಪಕ್ಕೀಗ ಕಾಂಗ್ರೆಸ್ ಉತ್ತರ ಕೊಟ್ಟಿದೆ.

ಖುಷ್ಬೂ ಅವರ ಕಾಲೇಜು ಭೇಟಿಯ ವೇಳೆ ಜೊತೆಗಿದ್ದ ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ಆಸ್ಕರ್ ಫೆರ್ನಾಂಡಿಸ್ ನಿಕಟ ಬಂಧು ಮೇರಿ ಶ್ರೇಷ್ಠ ಬಗ್ಗೆ ಬಿಜೆಪಿ ಅಕ್ಷೇಪ ವ್ಯಕ್ತಪಡಿಸಿದೆ. ಸಂತ್ರಸ್ತೆಯ ಹೇಳಿಕೆ ಪಡೆಯುವ ವೇಳೆ ಹಿರಿಯ ವಕೀಲೆ ಮೇರಿ ಶ್ರೇಷ್ಠ ಜೊತೆಗಿದ್ದರು. ಹೀಗಾಗಿ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ ಪ್ರತಿಭಟನಾ ಸಭೆಯಲ್ಲಿ ಈ ಬಗ್ಗೆ ಮಾತನಾಡಿರುವ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯ್ಲಾಡಿ ಸುರೇಶ್ ನಾಯಕ್, ಖುಷ್ಬೂ ಜೊತೆ ಮೇರಿ ಶ್ರೇಷ್ಠ ಹೋಗಿದ್ಯಾಕೆ? ವಿಚಾರಣೆ ವೇಳೆ ಗಂಟೆಗಟ್ಟಲೆ ಖುಷ್ಬೂ ಜೊತೆ ಹಾಜರಿದ್ದರು. ಈ ಪ್ರಕರಣದಲ್ಲಿ ಅವರ ಪಾತ್ರ ಏನು? ಆರೋಪಿತ ಮಕ್ಕಳಿಗೆ ಆಶ್ರಯ ಕೊಡಲು ಪ್ರಯತ್ನ ಮಾಡುತ್ತಿದ್ದಾರೋ? ಇದರ ಹಿಂದೆ ಏನಾದರೂ ಸಂಚು ಇದಿಯಾ? ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರಾ? ಇದು ಕೂಡ ತನಿಖೆಯಲ್ಲಿ ತಿಳಿಯಬೇಕಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಉಡುಪಿ ವಿಡಿಯೋ ಇದ್ದರೆ ತೋರಿಸಿ ಎಂದ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಎನ್​ ರವಿಕುಮಾರ್ ತಿರುಗೇಟು

ಬಿಜೆಪಿ ಆರೋಪಕ್ಕೆ ಮಹಿಳಾ ಕಾಂಗ್ರೆಸ್ ಉತ್ತರ

ಇನ್ನು ಬಿಜೆಪಿ ಆರೋಪಕ್ಕೆ ಮಹಿಳಾ ಕಾಂಗ್ರೆಸ್ ಉತ್ತರ ಕೊಟ್ಟಿದೆ. ಖುಷ್ಬೂ ಜೊತೆಗೆ ಇದ್ದ ಮೇರಿ ಶ್ರೇಷ್ಠ ಅವರು ತನಿಖೆಯಲ್ಲಿ ಪಾಲ್ಗೊಂಡಿದ್ದರು. ಅವರಾಗಿಯೇ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ಕೊಟ್ಟಿಲ್ಲ. ಮೇರಿ ಶ್ರೇಷ್ಠ ಅವರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯೆ. ಅವರು ಪಕ್ಷಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಜನರಿಗೆ ನ್ಯಾಯವಾದಿಸುವಲ್ಲಿ ಸತತ ಕಾರ್ಯ ಮಾಡುತ್ತಿದ್ದಾರೆ. ಹಾಜರಾಗಬೇಕೆಂಬ ನೋಟಿಸ್ ಬಂದ ಹಿನ್ನೆಲೆಯಲ್ಲಿ ಹೋಗಿದ್ದಾರೆ. ಖುಷ್ಬೂ ಜೊತೆ ಬಿಜೆಪಿ ಶಾಸಕಿ ಭಾಗಿರತಿ ಮುರುಳ್ಯ ಬಂದಿದ್ದರು. ರಾಷ್ಟ್ರೀಯ ಸದಸ್ಯೆ ಬರುವಾಗ ಬಿಜೆಪಿ ಪಕ್ಷದ ಶಾಸಕಿಯನ್ನು ಕರೆದುಕೊಂಡು ಬರಬೇಕೆಂದೇನೂ ಇಲ್ಲ. ಖುಷ್ಬೂ ಹೇಳಿಕೆಯಿಂದ ಬಿಜೆಪಿಗೆ ಚಿಂತೆಯಾಗಿದೆ. ಚಿಂತೆ ಹೆಚ್ಚಾಗಿ ಅವರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕಿ ಡಾ. ಸುನಿತಾ ಶೆಟ್ಟಿ ಹೇಳಿದರು.

ಉಡುಪಿ ಜಿಲ್ಲೆಗೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ