ಡಿಕೆ ಶಿವಕುಮಾರ್ ಮತ್ತು ಅಶ್ವಥ್ ನಾರಾಯಣ ಅಕ್ಕಪಕ್ಕ ಕೂತಿದ್ದರೂ ಅವರ ನಡುವೆ ಪೇಪರ್ಗಳ ಮಹಾಗೋಡೆ!
ಡಿಕೆ ಸೋದರರೊಂದಿಗೆ ಅಶ್ವಥ್ಗಿರುವ ಜಗಳ ಕನ್ನಡಿಗರಿಗೆ ಚೆನ್ನಾಗಿ ಗೊತ್ತು. ಅವರ ನಡುವೆ ಮಾತುಕತೆಯೂ ಇರಲಿಕ್ಕಿಲ್ಲ. ಹಾಗಾಗೇ ಪರಸ್ಪರ ಅವಾಯ್ಡ್ ಮಾಡಲು ಶಿವಕುಮಾರ್ ಕೈಯಲ್ಲಿ ಯಾವುದೋ ಕಾಗದ ಪತ್ರಗಳನ್ನು ಹಿಡಿದು ಕೂತಿದ್ದರೆ, ಅಶ್ವಥ್ ದಿನಪತ್ರಿಕೆಯೊಂದನ್ನು ಹಿಡಿದು ಕಣ್ಣಾಡಿಸಿದಂತೆ ಮಾಡುತ್ತಿದ್ದಾರೆ.
ಬೆಂಗಳೂರು: ನಗರದ ಕಿಮ್ಸ್ ಅಸ್ಪತ್ರೆಯ ಅವರಣಲ್ಲಿರುವ ಒಕ್ಕಲಿಗ ಸಮುದಾಯ ಭವನದ (Vokkaliga Community Hall) ಸಭಾಂಗಣದಲ್ಲಿ ಇಂದು ಅಭಿನಂದನಾ ಸಭೆಯೊಂದನ್ನು ಆಯೋಜಿಸಲಾಗಿತ್ತು. ಒಕ್ಕಲಿಗ ಮುಖಂಡರ ಚಿಂತನ ಮಂಥನ ಅಂತಲೂ ಕರೆಯಲಾದ ಇವತ್ತಿನ ಸಭೆಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನದ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ, ನಂಜಾವಧೂತ ಶ್ರೀ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ಕೃಷಿ ಸಚಿವ ಎನ್ ಚಲುವರಾಯಸ್ವಾಮಿ, ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayana) ಮೊದಲಾದವರು ಭಾಗಿಯಾಗಿದ್ದರು. ವೇದಿಕೆ ಮೇಲೆ ಅಕ್ಕಪಕ್ಕ ಕೂತಿರುವ ಶಿವಕುಮಾರ್ ಹಾಗೂ ಅಶ್ವಥ್ ನಾರಾಯಣರನ್ನು ಗಮನಿಸಿ. ಅವರು ಕೈಗಳಲ್ಲಿ ಪೇಪರ್ ಗಳನ್ನು ನೆಪಮಾತ್ರಕ್ಕೆ ಹಿಡಿದು ಓದುವ ಹಾಗೆ ನಟಿಸುತ್ತಿದ್ದಾರೆ. ಡಿಕೆ ಸೋದರರೊಂದಿಗೆ ಅಶ್ವಥ್ ಗಿರುವ ಜಗಳ ಕನ್ನಡಿಗರಿಗೆ ಚೆನ್ನಾಗಿ ಗೊತ್ತು. ಅವರ ನಡುವೆ ಮಾತುಕತೆಯೂ ಇರಲಿಕ್ಕಿಲ್ಲ. ಹಾಗಾಗೇ ಪರಸ್ಪರ ಅವಾಯ್ಡ್ ಮಾಡಲು ಶಿವಕುಮಾರ್ ಕೈಯಲ್ಲಿ ಯಾವುದೋ ಕಾಗದ ಪತ್ರಗಳನ್ನು ಹಿಡಿದು ಕೂತಿದ್ದರೆ, ಅಶ್ವಥ್ ದಿನಪತ್ರಿಕೆಯೊಂದನ್ನು ಹಿಡಿದು ಕಣ್ಣಾಡಿಸಿದಂತೆ ಮಾಡುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ