ನಿಯಮ ಉಲ್ಲಂಘಿಸಿದವನ ಪರ ವಹಿಸಿ ಟ್ರಾಫಿಕ್ ಎಎಸ್ಐರನ್ನು ದಬಾಯಿಸಿದ ದೇವನಹಳ್ಳಿ ಏರ್​ಪೋರ್ಟ್ ಪಿಎಸ್ಐ! ಆಡಿಯೋ ವೈರಲ್!!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 28, 2022 | 12:52 PM

ಮುತ್ತರಾಜ್ ತಮ್ಮ ಅಧಿಕಾರದ ಸೀನಿಯಾರಿಟಿಯನ್ನು ಬಳಸಿ ವೆಂಕಟೇಶರನ್ನು ದಬಾಯಿಸಲು ಆರಂಭಿಸಿದಾಗ ಟ್ರಾಫಿಕ್ ಎಎಸ್ಐ ಸರಿಯಾಗಿ ತಿರುಗೇಟು  ನೀಡುತ್ತಾರೆ.

ಬೆಂಗಳೂರು: ಕಾನೂನು ಪರಿಪಾಲಕರಿಬ್ಬರು ಪುಡಿ ರೌಡಿಗಳಂತೆ ಫೋನಲ್ಲಿ ವಾಕ್ಸಮರ ನಡೆಸಿದ ವಿಡಿಯೋ ಇದು. ಟ್ರಾಫಿಕ್ ಇನ್ಸ್ ಪೆಕ್ಟರ್ ವೆಂಕಟೇಶ್ ಎನ್ನುವವರ ಮೇಲೆ ದೇವನಹಳ್ಳಿ ಏರ್ಪೋರ್ಟ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮುತ್ತುರಾಜ್ (Muthuraj) ನಡೆದಿರುವ ಜೋರು ಮಾತಿನ ಸಂಭಾಷಣೆಯನ್ನು ಕೇಳಿ ಮಾರಾಯ್ರೇ. ಹಾಗೆ ನೋಡಿದರೆ, ಟ್ರಾಫಿಕ್ ಎಎಸ್ ಐ ವೆಂಕಟೇಶ್ (Venkatesh) ಅವರದ್ದೇನೂ ತಪ್ಪಿಲ್ಲ. ದಂಡದ ಮೊತ್ತ ರೂ. 41,000 ಆಗಿರುವಷ್ಟು ಬಾರಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿರುವ ವ್ಯಕ್ತಿಯನ್ನು ದಂಡ ತೆರುವಂತೆ ಅವರು ತಡೆದು ನಿಲ್ಲಿಸಿದ್ದಾರೆ. ಅವನಿಗೆ ಪಿಎಸ್ ಐ ಮುತ್ತುರಾಜರ ಪರಿಚಯವಿದೆ. ಅವರಿಗೆ ಫೋನ್ ಮಾಡಿ ಬಚಾವಾಗುವ ಹುನ್ನಾರ ಬೈಕ್ ಸವಾರನದ್ದು (biker).

ಮುತ್ತುರಾಜ ಫೋನ್ ಮಾಡಿದಾಗ ವೆಂಕಟೇಶ್ ವಿಷಯ ವಿವರಿಸುತ್ತಾರೆ. ನಂತರ ಮುತ್ತರಾಜ್ ತಮ್ಮ ಅಧಿಕಾರದ ಸೀನಿಯಾರಿಟಿಯನ್ನು ಬಳಸಿ ವೆಂಕಟೇಶರನ್ನು ದಬಾಯಿಸಲು ಆರಂಭಿಸಿದಾಗ ಟ್ರಾಫಿಕ್ ಎಎಸ್ಐ ಸರಿಯಾಗಿ ತಿರುಗೇಟು  ನೀಡುತ್ತಾರೆ.

Published on: Oct 28, 2022 12:44 PM