Puneeth Rajkumar: ‘ಈ ಪ್ರಶ್ನೆಗೆ ಉತ್ತರಿಸೋದು ಕಷ್ಟ’; ಗಂಧದ ಗುಡಿ ಬಗ್ಗೆ ಕೇಳಿದ್ದಕ್ಕೆ ಶಿವಣ್ಣ ಪ್ರತಿಕ್ರಿಯೆ
Shivarajkumar | Gandhada Gudi: ಪುನೀತ್ ರಾಜ್ಕುಮಾರ್ ಅಭಿಮಾನಿಗಳು ‘ಗಂಧದ ಗುಡಿ’ ಸಾಕ್ಷ್ಯಚಿತ್ರವನ್ನು ಬಹಳ ಮೆಚ್ಚಿಕೊಂಡಿದ್ದಾರೆ. ಪ್ರಕೃತಿ ಉಳಿಸಬೇಕು ಎಂಬ ಸಂದೇಶ ಈ ಡಾಕ್ಯುಮೆಂಟರಿಯಲ್ಲಿ ಇದೆ.
ನಟ ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಅಗಲಿಕೆಯ ನೋವಿನಿಂದ ಹೊರಬರಲು ಕುಟುಂಬದವರಿಗೆ ಎಂದಿಗೂ ಸಾಧ್ಯವಾಗುವುದಿಲ್ಲ. ಅಪ್ಪು ಡ್ರೀಮ್ ಪ್ರಾಜೆಕ್ಟ್ ಆಗಿದ್ದ ‘ಗಂಧದ ಗುಡಿ’ (Gandhada Gudi) ಸಾಕ್ಷ್ಯಚಿತ್ರ ಇಂದು (ಅ.28) ಎಲ್ಲೆಡೆ ರಿಲೀಸ್ ಆಗಿದೆ. ಇದನ್ನು ನೋಡಿದ ಅನೇಕರು ಭಾವುಕರಾಗುತ್ತಿದ್ದಾರೆ. ಈ ಬಗ್ಗೆ ಕೇಳಿದ್ದಕ್ಕೆ, ‘ಈ ಪ್ರಶ್ನೆಗೆ ಉತ್ತರಿಸೋದು ತುಂಬ ಕಷ್ಟ’ ಎಂದು ಶಿವರಾಜ್ಕುಮಾರ್ (Shivarajkumar) ಅವರು ಹೇಳಿದ್ದಾರೆ. ಇಂದು ಸಂಜೆ ಅವರು ‘ಗಂಧದ ಗುಡಿ’ ನೋಡುವುದಾಗಿ ತಿಳಿಸಿದ್ದಾರೆ. ಪ್ರಕೃತಿ ಉಳಿಸಬೇಕು ಎಂಬ ಸಂದೇಶ ಈ ಡಾಕ್ಯುಮೆಂಟರಿಯಲ್ಲಿ ಇದೆ. ಪುನೀತ್ ಅಭಿಮಾನಿಗಳು ಇದನ್ನು ಬಹಳ ಮೆಚ್ಚಿಕೊಂಡಿದ್ದಾರೆ.
Latest Videos