ಕೋಲಾರದ ಕಾರ್ಯಕರ್ತರು ಮೈಸೂರಲ್ಲಿ ಸಿದ್ದರಾಮಯ್ಯರನ್ನು ಭೇಟಿಯಾದಾಗ ಅವರು ಟ್ರ್ಯಾಕ್ ಸೂಟ್ ಧರಿಸಿ ಪಾರ್ಕ್ನಲ್ಲಿ ವಾಕ್ ಮಾಡುತ್ತಿದ್ದರು!
ಮೈಸೂರಿನ ಪಾರ್ಕೊಂದರಲ್ಲಿ ಅವರು ವಾಕ್ ಮಾಡುತ್ತಿದ್ದಾಗ, ಕಾರ್ಯಕರ್ತರು ಅವರನ್ನು ಭೇಟಿಯಾಗಿ, ಬೋಕೆ ನೀಡಿ ಶುಭ ಹಾರೈಸಿದ ಬಳಿಕ ಕೋಲಾರದ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಗ್ರಹಿಸಿದರು.
ಮೈಸೂರು: ನೈಕಿ ಬ್ರ್ಯಾಂಡಿನ ಟ್ರ್ಯಾಕ್ ಸೂಟ್ ಮತ್ತು ತಲೆಯ ಮೇಲೆ ನೀಲಿ ಬಣ್ಣದ ಕ್ಯಾಪ್ ಧರಿಸಿ ಕೆಮೆರಾಳಿಗೆ ಪೋಸು ನೀಡುತ್ತಿರುವ ಇವರನ್ನು ಇಂಡಿಯನ್ ಪ್ರಿಮೀಯರ್ ಲೀಗ್ ನಲ್ಲಿ ಆಡುವ ಯಾವುದಾದರೂ ಟೀಮಿನ ಕೋಚ್ (coach) ಅಗಿರಬಹುದೆಂದು ನೀವು ಭಾವಿಸಿರಲಿಕ್ಕೂ ಸಾಕು ಮಾರಾಯ್ರೇ. ಇದು ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯನವರ (Siddaramaiah) ಅರ್ಲಿ ಮಾರ್ನಿಂಗ್ ಗೆಟಪ್! ಶುಕ್ರವಾರ ಬೆಳಗ್ಗೆ ಮೈಸೂರಿನ ಪಾರ್ಕೊಂದರಲ್ಲಿ ಅವರು ವಾಕ್ ಮಾಡುತ್ತಿದ್ದಾಗ, ಕೋಲಾರ (Kolar) ಕಾರ್ಯಕರ್ತರು ಅವರನ್ನು ಭೇಟಿಯಾಗಿ, ಬೋಕೆ ನೀಡಿ ಶುಭ ಹಾರೈಸಿದ ಬಳಿಕ ಕೋಲಾರದ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸುವಂತೆ ಆಗ್ರಹಿಸಿದರು.
Published on: Oct 28, 2022 10:53 AM
Latest Videos