ಬೆಂಗಳೂರು-ದೇವನಹಳ್ಳಿ ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಕಿರಿಕಿರಿ: ಟೆಕ್ಕಿ ಯುವಕರ ಹುಚ್ಚಾಟಕ್ಕೆ ಸಾರ್ವಜನಿಕರ ಆಕ್ರೋಶ
ದೇವನಹಳ್ಳಿ ಹೊರವಲಯದ NH 44ರಲ್ಲಿ ಬೆಂಗಳೂರು ಟೆಕ್ಕಿಗಳು ಮಾರಣಾಂತಿಕ ಬೈಕ್ ವೀಲಿಂಗ್ ಸ್ಟಂಟ್‌ಗಳನ್ನು ನಡೆಸುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ. ಸಂಚಾರಿ ಪೊಲೀಸರ ಕಣ್ತಪ್ಪಿಸಿ ನಡೆಯುವ ಈ ಅಪಾಯಕಾರಿ ಸಾಹಸಗಳ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅತಿವೇಗದ ಮತ್ತು ನಿರ್ಲಕ್ಷ್ಯದ ಈ ವೀಲಿಂಗ್‌ನಿಂದ ಇತರೆ ವಾಹನ ಸವಾರರು ಹಾಗೂ ಪಾದಚಾರಿಗಳ ಜೀವಕ್ಕೆ ಅಪಾಯವಿದ್ದು, ತಕ್ಷಣ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ದೇವನಹಳ್ಳಿ, ಅ.24: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹೊರವಲಯದಲ್ಲಿ ಬೈಕ್ ವ್ಹೀಲಿಂಗ್ ಪುಂಡರ ಹಾವಳಿ ಮಿತಿಮೀರಿದೆ. ಬೆಂಗಳೂರು ನಗರದಿಂದ ಐಷಾರಾಮಿ ಬೈಕ್‌ಗಳಲ್ಲಿ ಆಗಮಿಸುವ ಕೆಲ ಯುವಕರು, ಅದರಲ್ಲೂ ಬಹುತೇಕ ಸಿಲಿಕಾನ್ ಸಿಟಿ ಟೆಕ್ಕಿಗಳು ರಾಷ್ಟ್ರೀಯ ಹೆದ್ದಾರಿ 44ರಲ್ಲಿ (NH 44) ಪ್ರಾಣದ ಹಂಗು ತೊರೆದು ಡೆಡ್ಲಿ ವ್ಹೀಲಿಂಗ್ ಸ್ಟಂಟ್‌ಗಳನ್ನು ನಡೆಸುತ್ತಿದ್ದಾರೆ. ಸಂಚಾರಿ ಪೊಲೀಸರ ಕಣ್ಣುತಪ್ಪಿಸಿ ನಡೆಸುವ ಈ ಅಪಾಯಕಾರಿ ಸಾಹಸಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಬೆಂಗಳೂರು ನಗರದಿಂದ ಹೊರಟು ದೇವನಹಳ್ಳಿ ಹೊರವಲಯಕ್ಕೆ ಬರುವ ಬೈಕ್ ಸವಾರರು, ವಾಹನಗಳು ಭೀಕರ ವೇಗದಲ್ಲಿ ಸಾಗುವ ಎನ್‌ಹೆಚ್ 44 ಹೆದ್ದಾರಿಯಲ್ಲಿ ಐಷಾರಾಮಿ ಬೈಕ್‌ಗಳನ್ನು ಒಂಟಿ ಚಕ್ರದ ಮೇಲೆ ಎತ್ತಿ ವ್ಹೀಲಿಂಗ್ ಮಾಡುತ್ತಿದ್ದಾರೆ. ಹೆದ್ದಾರಿಯಲ್ಲಿ ಈ ರೀತಿ ಜೀವದೊಂದಿಗೆ ಚೆಲ್ಲಾಟವಾಡುವ ವೀಡಿಯೊಗಳನ್ನು ಚಿತ್ರೀಕರಿಸಿಕೊಳ್ಳುವ ಈ ಪುಂಡರು, ನಂತರ ಖುಷಿಗಾಗಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿ ಗಬ್ಟು ಎಬ್ಬಿಸುತ್ತಿದ್ದಾರೆ. ಹೈವೇಯಲ್ಲಿ ಈ ರೀತಿಯ ಅತಿವೇಗದ ಮತ್ತು ನಿರ್ಲಕ್ಷ್ಯದ ವ್ಹೀಲಿಂಗ್ ರೈಡ್‌ಗಳಿಂದಾಗಿ ಇತರೆ ವಾಹನ ಸವಾರರು ಹಾಗೂ ಪಾದಚಾರಿಗಳ ಜೀವಕ್ಕೆ ಭಾರೀ ಅಪಾಯ ಎದುರಾಗಿದೆ. ಹೆದ್ದಾರಿಯಲ್ಲಿ ಇವರ ವ್ಹೀಲಿಂಗ್ ಹಾವಕ್ತಿಗೆ ತಕ್ಷಣವೇ ಬ್ರೇಕ್ ಹಾಕಬೇಕು ಎಂದು ಸಾರ್ವಜನಿಕರು ಮತ್ತು ಪ್ರಯಾಣಿಕರು ಒತ್ತಾಯಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

