ಹಿಜಾಬ್ ಧರಿಸಿ ಪರೀಕ್ಷೆ ಬರೆಯುತ್ತೇವೆ ಅಂತ ಹಟ ಹಿಡಿದ ವಿದ್ಯಾರ್ಥಿನಿಯರಿಗೆ ಉನ್ಯಾಸಕರು ಮತ್ತು ದೇವನಹಳ್ಳಿ ತಹಸೀಲ್ದಾರ್ ಮನವೊಲಿಸುತ್ತಾರೆ
ಉಪನ್ಯಾಸಕರು ತಮ್ಮ ಪ್ರಯತ್ನ ನಿಲ್ಲಿಸದೆ ವಿದ್ಯಾರ್ಥಿನಿಯರೊಂದಿಗೆ ಮಾತಾಡುವುದನ್ನು ಮುಂದುವರಿಸುತ್ತಾರೆ. ಸುಮಾರು 10-15 ನಿಮಿಷಗಳ ನಂತರ ವಿದ್ಯಾರ್ಥಿನಿಯರು ಅರೆಮನಸ್ಸಿನಿಂದಲೇ ಹಿಜಾಬ್ ತೆಗೆದಿಟ್ಟು ತರಗತಿಗಳಿಗೆ ಹೋಗಲು ತಯಾರಾಗುತ್ತಾರೆ.
ಮುಸ್ಲಿಂ ಸಮುದಾಯ ವಿದ್ಯಾರ್ಥಿನಿಯರು ಹಿಜಾಬ್ (hijab) ಧರಿಸಿ ಶಾಲಾ ಕಾಲೇಜುಗಳಿಗೆ ಬರುವ ಹಟ ಮುಂದುವರಿಸಿದ್ದಾರೆ. ಬೆಂಗಳೂರು ದೇವನಹಳ್ಳಿ (Devanhalli) ತಾಲ್ಲೂಕಿನಲ್ಲಿ ಬರುವ ವಿಜಯಪುರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ (women’s college) ವಿದ್ಯಾರ್ಥಿನಿಯರ ಒಂದು ಗುಂಪು ಹಿಜಾಬ್ ಧರಿಸಿ ಕಾಲೇಜಿಗೆ ಬಂದಿತ್ತಲ್ಲದೆ, ಅದನ್ನು ಧರಿಸಿಯೇ ಪರೀಕ್ಷೆ ಬರೆಯುವುದಾಗಿ ಹಟ ಸಾಧಿಸಲಾರಂಭಿಸಿತು. ಕಾಲೇಜಿನ ಪ್ರಿನ್ಸಿಪಾಲ್ ಮತ್ತು ಉಪನ್ಯಾಸಕರು ಅವರ ಮನವೊಲಿಸುವ ಪ್ರಯತ್ನಗಳು ವಿಫಲವಾದವು. ಈ ಸಂದರ್ಭದಲ್ಲಿ ದೇವನಹಳ್ಳಿ ತಹಸೀಲ್ದಾರ ಶಿವರಾಜ್ ಕಾಲೇಜಿಗೆ ಅಗಮಿಸಿದರು. ಕಾಲೇಜಿನ ಸಿಬ್ಬಂದಿ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದರೋ ಅಥವಾ ಅವರು ಆಕಸ್ಮಿಕವಾಗಿ ಅಲ್ಲಿಗೆ ಬಂದರೋ ಅನ್ನುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಅವರೊಂದಿಗೆ ಕೆಲ ಪೊಲೀಸ್ ಅಧಿಕಾರಿಗಳು ಸಹ ಕಾಲೇಜು ಅವರಣಕ್ಕೆ ಬಂದರು.
ತಹಸೀಲ್ದಾರ ಮತ್ತು ಕಾಲೇಜಿನ ಉಪನ್ಯಾಸಕರು ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರಿಗೆ ಕೋರ್ಟ್ ನೀಡಿರುವ ಆದೇಶವನ್ನು ಮತ್ತೊಮ್ಮೆ ವಿವರಿಸಿ ಹೇಳಿದರು. ಕೋರ್ಟ್ ಆದೇಶವನ್ನು ನಾವು ನೀವು ಮಾತ್ರ ಅಲ್ಲ, ರಾಜ್ಯದ ಮುಖ್ಯಮಂತ್ರಿ, ದೇಶದ ಪ್ರಧಾನ ಮಂತ್ರಿ ಸಹ ಪಾಲಿಸಬೇಕು. ಸುಮ್ಮನೆ ವ್ಯರ್ಥ ಹಟ ಮಾಡಬೇಡಿ, ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆಯಿರಿ ಅಂತ ಕನ್ವಿನ್ಸ್ ಮಾಡುವ ಧಾಟಿಯಲ್ಲಿ ಹೇಳುತ್ತಿದ್ದರೂ ವಿದ್ಯಾರ್ಥಿನಿಯರು ಜಪ್ಪಯ್ಯ ಅನ್ನಲಿಲ್ಲ.
ಆದರೆ, ಉಪನ್ಯಾಸಕರು ತಮ್ಮ ಪ್ರಯತ್ನ ನಿಲ್ಲಿಸದೆ ವಿದ್ಯಾರ್ಥಿನಿಯರೊಂದಿಗೆ ಮಾತಾಡುವುದನ್ನು ಮುಂದುವರಿಸುತ್ತಾರೆ. ಸುಮಾರು 10-15 ನಿಮಿಷಗಳ ನಂತರ ವಿದ್ಯಾರ್ಥಿನಿಯರು ಅರೆಮನಸ್ಸಿನಿಂದಲೇ ಹಿಜಾಬ್ ತೆಗೆದಿಟ್ಟು ತರಗತಿಗಳಿಗೆ ಹೋಗಲು ತಯಾರಾಗುತ್ತಾರೆ.
ಉಪನ್ಯಾಸಕರೊಬ್ಬರು ಸ್ಟಾಫ್ ರೂಮಿಗೆ ಹೋಗಿ ಹಿಜಾಬ್ ತೆಗೆಯಿರಿ ಅಂತ ಹೇಳುತ್ತಾರೆ.
ಇದನ್ನೂ ಓದಿ: Hijab: ಹಿಜಾಬ್ ತೀರ್ಪು ವಿರೋಧಿಸಿ ಕರ್ನಾಟಕ ಬಂದ್ ಕರೆಗೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ