ದಲಿತ, ಬಡವ ಮತ್ತು ಹಿಂದುಳಿದ ವರ್ಗಗಳ ಉದ್ಧಾರಕ್ಕಾಗಿ ಶ್ರಮಿಸಿದ ದೇವರಾಜ ಅರಸು ಸಾಮಾಜಿಕ ಹರಿಕಾರ: ಸಿದ್ದರಾಮಯ್ಯ
ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ ಮೈಸೂರು ರಾಜ್ಯದ ಉದಯ 1956ರಲ್ಲಾದರೂ 1973 ರವರೆಗೆ ಅದು ಮೈಸೂರು ಸಂಸ್ಥಾನವೆಂದು ಕರೆಸಿಕೊಳ್ಳುತಿತ್ತು. ಮೈಸೂರನ್ನು ಕರ್ನಾಟಕ ಎಂದು ಪುನರ್ ನಾಮಕರಣ ಮಾಡಿದ್ದು ದೇವರಾಜ ಅರಸುರವರು, ಬಡವರು, ದಲಿತರು ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ದುಡಿದ ಮತ್ತು ಶ್ರಮಿಸಿದ ಧೀಮಂತ ನಾಯಕ ಅವರು ಎಂದು ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು, ಆಗಸ್ಟ್ 20: ಇವತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಡಿ ದೇವರಾಜು ಅರಸುರವರ (late D Devraj Urs) 110 ಜನ್ಮ ವಾರ್ಷಿಕೋತ್ಸವ. ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಧ್ಯಮಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾವನೂರ್ ಆಯೋಗ ರಚಿಸಿ, ಅದು ನೀಡಿದ ವರದಿಯಲ್ಲಿನ ಶಿಫಾರಸ್ಸುಗಳನ್ನು ಜಾರಿಗೆ ತಂದು ಹಿಂದುಳಿದ ವರ್ಗಗಳಿಗೆ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಕಲ್ಪಿಸಿದ ಅರಸುರವರು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕೊಂಡಾಡಿದರು. ಅರಸುರವರು ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದು ಭೂಮಿಯನ್ನು ಉಳುವವನೇ ಅದರ ಒಡೆಯ ಎಂದು ಘೋಷಿಸಿದರು. ಸರ್ಕಾರ ಪ್ರತಿವರ್ಷ ಅವರ ಜನ್ಮ ವಾರ್ಷಿಕೋತ್ಸವ ಆಚರಿಸಿ ಗೌರವ ಸಲ್ಲಿಸುವ ಕೆಲಸ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ದೇವರಾಜ ಅರಸು ರಾಜ್ಯದ ಮುಖ್ಯಮಂತ್ರಿಯಾದಾಗ ವಿಧಾನಸಭಾ ಸದಸ್ಯ ಕೂಡ ಆಗಿರಲಿಲ್ಲ: ಕೆಎನ್ ರಾಜಣ್ಣ, ಸಚಿವ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
