RCB vs GT: 6,6,6,6,6,6.. 20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
Devdutt Padikkal's Explosive Fifty: ಐಪಿಎಲ್ 2026 ರ RCB Vs GT ಪಂದ್ಯದಲ್ಲಿ ಗುಜರಾತ್ ನೀಡಿದ 206 ರನ್‌ಗಳ ಭಾರಿ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ಪರ ದೇವದತ್ ಪಡಿಕ್ಕಲ್ ಕೇವಲ 20 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 2 ಬೌಂಡರಿಗಳ ಸಹಿತ ಅಬ್ಬರದ ಅರ್ಧಶತಕ ಗಳಿಸಿ ತಂಡಕ್ಕೆ ಆಧಾರವಾದರು. ವಿರಾಟ್ ಕೊಹ್ಲಿ ಜೊತೆ ಶತಕದ ಜೊತೆಯಾಟ ನಿರ್ಮಿಸಿದ ಪಡಿಕ್ಕಲ್, ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದರು.
ಐಪಿಎಲ್ 2026 ರ 34 ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ನೀಡಿರುವ 207 ರನ್‌ಗಳ ಗುರಿ ಬೆನ್ನಟ್ಟಿದ ಆರ್‌ಸಿಬಿ ಪರ ಲೋಕಲ್ ಬಾಯ್ ದೇವದತ್ ಪಡಿಕ್ಕಲ್ ಅಬ್ಬರದ ಅರ್ಧಶತಕ ಬಾರಿಸಿದರು. ಎಂದಿನಂತೆ ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಪಡಿಕ್ಕಲ್ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್ಗಟ್ಟಿದರು. ಆ ನಂತರವೂ ಒಂದೇ ಗೇರ್ನಲ್ಲಿ ಬ್ಯಾಟ್ ಬೀಸಿದ ಪಡಿಕ್ಕಲ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ವಾಸ್ತವವಾಗಿ ಇಂದಿನ ಪಂದ್ಯದಲ್ಲಿ ಫಿಲ್ ಸಾಲ್ಟ್ ಆಡಿರಲಿಲ್ಲ. ಹೀಗಾಗಿ ಅವರ ಬದಲಿಗೆ ಜೆಕೋಬ್ ಬೆಥೆಲ್ಗೆ ತಂಡದಲ್ಲಿ ಆಡುವ ಅವಕಾಶ ಸಿಕ್ಕಿತು. ಅದರಂತೆ ವಿರಾಟ್ ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸಿದ ಬೆಥೆಲ್ 14 ರನ್ ಬಾರಿಸಿ ಔಟಾದರು. ಆ ನಂತರ ಬಂದ ಪಡಿಕ್ಕಲ್ ಕೊಹ್ಲಿ ಜೊತೆಗೆ ಶತಕದ ಜೊತೆಯಾಟ ಕಟ್ಟಿದರು. ಮಾತ್ರವಲ್ಲದೆ 20 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 2 ಬೌಂಡರಿಗಳ ಸಹಿತ ಅರ್ಧಶತಕ ಪೂರೈಸಿದರು. ಅಂದರೆ ಪಡಿಕ್ಕಲ್ ಕೇವಲ ಬೌಂಡರಿ ಸಿಕ್ಸರ್ಗಳಿಂದಲೇ 44 ರನ್ ಕಲೆಹಾಕಿದರು. ಈ ಅರ್ಧಶತಕದೊಂದಿಗೆ ಪಡಿಕ್ಕಲ್ ಐಪಿಎಲ್‌ನಲ್ಲಿ 2000 ರನ್ಗಳನ್ನು ಸಹ ಪೂರೈಸಿದರು.