ದೇವೇಗೌಡ್ರು ಪ್ರಧಾನಿಯಾದ್ರು, ಯಶ್ ಗ್ಲೋಬಲ್ ಸ್ಟಾರ್ ಆದ್ರೂ: ಹಾಸನದವರಿಗೆ ವಿಶೇಷ ಶಕ್ತಿ ಎಂದ ರಂಗಾಯಣ ರಘು
ಪ್ರೇಮದ ಊರಲ್ಲಿ ಚಿತ್ರದ ಯಶಸ್ಸಿನ ಕುರಿತು ಹಿರಿಯ ನಟ ರಂಗಾಯಣ ರಘು ಟಿವಿ9 ಕನ್ನಡದೊಂದಿಗೆ ಮಾತನಾಡಿದ್ದಾರೆ. ಈ ಸಂದರ್ಶನದಲ್ಲಿ, ನಿರ್ದೇಶಕ ಮನೋಜ್ ಕುಮಾರ್ ಅವರ ಪ್ರಯಾಣ, ರಾಷ್ಟ್ರ ಪ್ರಶಸ್ತಿ ಪಡೆದ ಅಕ್ಷಿ ಚಿತ್ರದಿಂದ ಪ್ರೇಮದ ಊರಲ್ಲಿವರೆಗಿನ ಕಥೆ, ಮತ್ತು ರೈತರ ಬದುಕನ್ನು ಬಿಂಬಿಸುವ ಕಥೆಗಳ ಮಹತ್ವವನ್ನು ರಘು ವಿವರಿಸಿದ್ದಾರೆ. ಈ ಚಿತ್ರ ಮನುಷ್ಯ ಸಂಬಂಧಗಳ ಸೂಕ್ಷ್ಮತೆಯನ್ನು ಕಟ್ಟಿಕೊಟ್ಟಿದೆ ಎಂದರು.
ಬೆಂಗಳೂರು, ಅಕ್ಟೋಬರ್ 03: ‘ಹಾಸನದವರಿಗೆ ಒಂದು ವಿಶೇಷವಾದ ಶಕ್ತಿಯಿದೆ. ಹಾಸನಾಂಬೆಯ ಆಶೀರ್ವಾದವೋ ಏನೋ, ದೇವೇಗೌಡರು ಪ್ರಧಾನಿ ಆಗುತ್ತಾರೆ. ನಟ ಯಶ್ ಜಾಗತಿಕ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಹೀಗಾಗಿ ಹಾಸದವರಿಗೆ ವಿಶೇಷವಾದ ಶಕ್ತಿಯಿದೆ’ ಎಂದು ನಟ ರಂಗಾಯಣ ರಘು ಅವರು ಅಭಿಪ್ರಾಯಪಟ್ಟರು. ‘ಪ್ರೇಮದ ಊರಲಿ’ ಸಿನಿಮಾ ಸಕ್ಸಸ್ ಹಿನ್ನೆಲೆ ಟಿವಿ9 ಕನ್ನಡ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಬೇಲೂರು-ಹಳೆಬೀಡು ಸುತ್ತಮುತ್ತಲಿನ ಹೊಯ್ಸಳರ ಕಾಲದ ಸ್ಥಳಗಳಲ್ಲಿ, ಕೆರೆಯ ಪಕ್ಕದಲ್ಲಿರುವ ಹಳೆಯ ಲಕ್ಷ್ಮೀ ದೇವಸ್ಥಾನದಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಪ್ರದೇಶದ ಸ್ಥಳೀಯರು, ವಿಶೇಷವಾಗಿ ಗೌಡ್ರು ಕುಟುಂಬದವರು ನೀಡಿದ ಸಹಕಾರವನ್ನು’ ನಟ ರಂಗಾಯಣ ರಘು ಅವರು ಶ್ಲಾಘಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Oct 03, 2026 05:11 PM
Loading...
Unable to load recommendations.
Follow Us
