ಧರ್ಮಸ್ಥಳದ ಲಕ್ಷ ದೀಪೋತ್ಸವಕ್ಕೆ ಇಂದು ಕೊನೇದಿನ, ದೇಶದ ನಾನಾಭಾಗಗಳಿಂದ ಆಗಮಿಸುತ್ತಿರುವ ಭಕ್ತಾದಿಗಳು

|

Updated on: Nov 30, 2024 | 10:26 AM

ಧರ್ಮಸ್ಥಳ ಲಕ್ಷ ದೀಪೋತ್ಸವವನ್ನು ಶತಮಾನಗಳಿಂದ ವರ್ಷಂಪ್ರತಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಮೇಳೈಸುತ್ತವೆ. ವಸ್ತುಪ್ರದರ್ಶನ, ಮಕ್ಕಳ ಮನರಂಜನೆಗೆ ಜೈಂಟ್ ವ್ಹೀಲ್ ಮತ್ತು ಬೇರೆ ಬೇರೆ ಆಟದ ವಿಧಾನಗಳು, ಕರಾವಳಿ ಭಾಗದ ತಿಂಡಿ ತಿನಿಸುಗಳು, ನೃತ್ಯ, ಹಾಡುಗಾರಿಕೆ ಮೊದಲಾದ ಎಲ್ಲವನ್ನೂ ಇಲ್ಲಿ ಕಾಣಬಹುದು.

ಮಂಗಳೂರು: ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ನವೆಂಬರ್ 26 ರಂದು ಆರಂಭಗೊಂಡ ಲಕ್ಷ ದೀಪೋತ್ಸವಕ್ಕೆ ಇಂದು ಕೊನೆಯ ದಿನ. ಪ್ರತಿದಿನ ಸಾವಿರಾರು ಭಕ್ತಾದಿಗಳು ಧರ್ಮಸ್ಥಳಕ್ಕೆ ಆಗಮಿಸಿ ದೀಪಗಳ ಕಲವರ ವೀಕ್ಷಿಸುತ್ತಿದ್ದಾರೆ. ಇಲ್ಲಿನ ಮಂಜುನಾಥ ದೇವಸ್ಥಾನ ಮಾತ್ರವಲ್ಲ ಇಡೀ ಧರ್ಮಸ್ಥಳವೇ ದೀಪಗಳಿಂದ ಅಲಂಕೃತಗೊಂಡು ವಿಜೃಂಭಿಸುತ್ತಿದೆ. ಭಕ್ತರಿಗೆ ಗೊತ್ತಿರುವಂತೆ ಧರ್ಮಸ್ಥಳದಲ್ಲಿ ದೀಪಾವಳಿ, ವಿಷುಸಂಕ್ರಮಣ ಮತ್ತು ಲಕ್ಷ ದೀಪೋತ್ಸವ ಮೂರು ಆಚರಣೆಗಳನ್ನು ಬಹು ಸಂಭ್ರಮ ಮತ್ತು ಸಡಗರದಿಂದ ಆಚರಿಸಲಾಗುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕೋಟೆನಾಡಿನಲ್ಲಿ ವಿಶೇಷ ಸಂಭ್ರಮ; ಮನೆ ಮನೆಗಳಲ್ಲಿ ದೀಪ ಹಚ್ಚಿ ಲಕ್ಷ ದೀಪೋತ್ಸವ ಆಚರಣೆ