ಹೊಸ ವರ್ಷದ ಮೊದಲ ದಿನವೇ ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆಯಲು ಹಿಂಡುಹಿಂಡು ಭಕ್ತರು
ಹೊಸ ವರ್ಷದ ಮೊದಲ ದಿನವೇ ರಾಯರ ದರ್ಶನ ಮಾಡಿ ಪಾವನರಾಗಲು ಭಕ್ತರ ದಂಡು ಕಳೆದ ರಾತ್ರಿಯಿಂದ ಹರಿದು ಬರುತ್ತಿದೆ. ರಾಯಚೂರು ಜಿಲ್ಲೆಯ ಟಿವಿ9 ಕನ್ನಡ ವಾಹಿನಿಯ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಬೆಳಗಿನ 4 ಗಂಟೆಯಿಂದಲೇ ಭಕ್ತರು ತುಂಗಭದ್ರೆಯಲ್ಲಿ ಪವಿತ್ರ ಸ್ನಾನ ಮಾಡಿ ರಾಯರ ದರ್ಶನಕ್ಕಾಗಿ ಬಂದು ಸಾಲಲ್ಲಿ ನಿಲ್ಲುತ್ತಿದ್ದಾರೆ.
ಮಂತ್ರಾಲಯ: ಹೊಸ ವರ್ಷವನ್ನು (New Year) ಜನ ತಮ್ಮದೇ ಆದ ರೀತಿಯಲ್ಲಿ ಸ್ವಾಗತಿಸುತ್ತಾರೆ ಇಲ್ಲಿದೆ ಮತ್ತೊಂದು ನಿದರ್ಶನ. ಇಲ್ನೋಡಿ, ಇದು ರಾಯಚೂರಿನಿಂದ ಕೇವಲ 40 ಕಿಮೀಗಳಷ್ಟು ದೂರವಿರುವ ಮಂತ್ರಾಲಯದಲ್ಲಿ (Mantralayam) ತುಂಗಭದ್ರಾ ನದಿ ತೀರದಲ್ಲಿರುವ ಗುರು ರಾಘವೇಂದ್ರ ಸ್ವಾಮಿಗಳ ಮಠ (Guru Raghavendra Swamy Mutt). ಹೊಸ ವರ್ಷದ ಮೊದಲ ದಿನವೇ ರಾಯರ ದರ್ಶನ ಮಾಡಿ ಪಾವನರಾಗಲು ಭಕ್ತರ ದಂಡು ಕಳೆದ ರಾತ್ರಿಯಿಂದ ಹರಿದು ಬರುತ್ತಿದೆ. ರಾಯಚೂರು ಜಿಲ್ಲೆಯ ಟಿವಿ9 ಕನ್ನಡ ವಾಹಿನಿಯ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಬೆಳಗಿನ 4 ಗಂಟೆಯಿಂದಲೇ ಭಕ್ತರು ತುಂಗಭದ್ರೆಯಲ್ಲಿ ಪವಿತ್ರ ಸ್ನಾನ ಮಾಡಿ ರಾಯರ ದರ್ಶನಕ್ಕಾಗಿ ಬಂದು ಸಾಲಲ್ಲಿ ನಿಲ್ಲುತ್ತಿದ್ದಾರೆ. ಈಗಾಗಲೇ ಸುಮಾರು ಒಂದು ಲಕ್ಷ ಜನ ರಾಘವೇಂದ್ರ ಸ್ವಾಮಿಯವರ ದರ್ಶನ ಪಡೆದಿರುವರೆಂದು ವರದಿಗಾರ ಹೇಳುತ್ತಾರೆ. ರಾಯರ ಮಠದ ಆಡಳಿರ ಮಂಡಳಿಯು ದರ್ಶನಕ್ಕಾಗಿ ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದೆ. ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದರೂ ನೂಕುನುಗ್ಗಲುನಂಥ ಸ್ಥಿತಿ ಎಲ್ಲೂ ನಿರ್ಮಾಣವಾಗಿಲ್ಲ. ಭಕ್ತರು ನೀಟಾಗಿ ಸರತಿ ಸಾಲುಗಳಲ್ಲಿ ನಡೆದುಹೋಗುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ