ಜ್ಞಾನಯೋಗಾಶ್ರಮದ ಆವರಣದಲ್ಲಿ ಜಮಾಯಿಸಿದ ಭಕ್ತಸಾಗರ, ಸಿದ್ದೇಶ್ವರ ಶ್ರೀ ದರ್ಶನಕ್ಕಾಗಿ ಎಲ್ಇಡಿ ಪರದೆ ಅಳವಡಿಕೆ

Edited By:

Updated on: Jan 01, 2023 | 6:24 PM

ಸಿದ್ದೇಶ್ವರ ನೋಡಿ ದರ್ಶನ ಪಡೆಯಲು ವಿಜಯಪುರದ ಜ್ಞಾನಯೋಗಾಶ್ರಮದತ್ತ ಭಕ್ತರ ದಂಡು ಧಾವಿಸಿ ಬರುತ್ತಿದೆ. ಇದರಿಂದ ಸಿದ್ದೇಶ್ವರ ಸ್ವಾಮೀಜಿಗಳ ದರ್ಶನಕ್ಕಾಗಿ ಎಲ್ಇಡಿ ಪರದೆ ಅಳವಡಿಕೆ ಮಾಡಲಾಗಿದೆ.

ವಿಜಯಪುರ: ಸಿದ್ದೇಶ್ವರ ಸ್ವಾಮೀಜಿಗಳ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಆದರೂ ಸಹ ಕೆಲ ವದಂತಿಗಳು ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸಿದ್ದೇಶ್ವರ ನೋಡಿ ದರ್ಶನ ಪಡೆಯಲು ವಿಜಯಪುರದ ಜ್ಞಾನಯೋಗಾಶ್ರಮದತ್ತ ಭಕ್ತರ ದಂಡು ಧಾವಿಸಿ ಬರುತ್ತಿದೆ.

ಉತ್ತರಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬಂದಿರುವ ಭಕ್ತರು ಯೋಗಾಶ್ರಮದ ಗೇಟ್ ಮುಂದೆ ಜಮಾವಣೆಯಾಗಿದ್ದು, ಶ್ರೀಗಳ ದರ್ಶನಕ್ಕಾಗಿ ಕಾಯುತ್ತಿದ್ದಾರೆ. ಇದರಿಂದ ಸಿದ್ದೇಶ್ವರ ಸ್ವಾಮೀಜಿಗಳ ದರ್ಶನಕ್ಕಾಗಿ ಎಲ್ಇಡಿ ಪರದೆ ಅಳವಡಿಕೆ ಮಾಡಲಾಗಿದೆ.