ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?

Updated on: Jan 06, 2025 | 8:10 PM

ಧನರಾಜ್ ಮತ್ತು ಹನುಮಂತ ಜೊತೆಯಾಗಿ ಸೇರಿದರೆ ಸಿಕ್ಕಾಪಟ್ಟೆ ಕಾಮಿಡಿ ಇರುತ್ತದೆ. ಬಹುತೇಕ ಎಲ್ಲ ಸಂದರ್ಭಗಳಲ್ಲೂ ಅವರು ಜಾಲಿ ಜಾಲಿಯಾಗಿ ಇರುತ್ತಾರೆ. ‘ಬಿಗ್ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮದ ಫಿನಾಲೆ ಸಮೀಪಿಸುತ್ತಿದೆ. ಈ ವೇಳೆ ‘ಈ ಮನೆಯಿಂದ ಹೊರಗೆ ಹೋಗು’ ಎಂದು ಧನರಾಜ್​ಗೆ ಹನುಮಂತ ಹೇಳಿದ್ದಾರೆ. ಯಾಕೆ ಅಂತ ನೋಡಿ..

‘ಫಿನಾಲೆ ಟಿಕೆಟ್​ ಇಟ್ಟಿರುವ ಜಾಗದ ಕಡೆಗೆ ಕಾಲು ಹಾಕಿ ಮಲಗುವುದಿಲ್ಲ’ ಎಂದು ಧನರಾಜ್ ಹೇಳಿದ್ದಾರೆ. ಇನ್ನೊಂದು ದಿಕ್ಕಿಗೆ ಕಾಲು ಹಾಕಿದರೆ ‘ಸೀಸನ್​ 11’ ಸಿಂಬಲ್ ಇದೆ ಎಂದು ಧನರಾಜ್​ಗೆ ಗೌತಮಿ ಹೆದರಿಸಿದ್ದಾರೆ. ‘ಹಾಗಾದರೆ ನೀನು ಈ ಮನೆಯಲ್ಲಿ ಮಲಗಬೇಡ. ಹೊರಗೆ ಹೋಗು’ ಎಂದು ಧನುಗೆ ಹನುಮಂತ ಹೇಳಿದ್ದಾರೆ. ಈ ಸಂಚಿಕೆಯ ಪ್ರೋಮೋ ಇಲ್ಲಿದೆ. ಈ ವಾರ ರಜತ್ ಅವರು ಕ್ಯಾಪ್ಟನ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More