ಆತುರದಲ್ಲಿ ಚಿಕನ್ ತಿಂದ ಧನರಾಜ್ ಆಚಾರ್; ಹೇಗಿದೆ ನೋಡಿ ಒದ್ದಾಟ
ಬಿಗ್ ಬಾಸ್ ಮನೆಯಲ್ಲಿ ಧನರಾಜ್ ಅವರು ಚಿಕನ್ ಸೇವಿಸಿದ್ದಾರೆ. ಅದು ಗೊತ್ತಾದ ಬಳಿಕ ಅವರು ಆತಂಕ ಮಾಡಿಕೊಂಡಿದ್ದಾರೆ. ತಾವು ತಿನ್ನುತ್ತಿರುವುದು ಚಿಕನ್ ಎಂಬುದು ಧನರಾಜ್ ಅವರಿಗೆ ತಿಳಿದಿರಲಿಲ್ಲ. ‘ಅದು ಚಿಕನ್’ ಎಂದು ಭವ್ಯಾ ಗೌಡ ಅವರು ಖಚಿತಪಡಿಸಿದರು. ಅದು ತಿಳಿದ ಬಳಿಕ ಧನರಾಜ್ ಅವರ ಟೆನ್ಷನ್ ಜಾಸ್ತಿ ಆಯಿತು. ಪ್ರೋಮೋ ಇಲ್ಲಿದೆ ನೋಡಿ..
ಧನರಾಜ್ ಅವರು ಗೊತ್ತಿಲ್ಲದೇ ಚಿಕನ್ ತಿಂದಿದ್ದಾರೆ. ರೆಸಾರ್ಟ್ ಟಾಸ್ಕ್ ನಿಭಾಯಿಸುವಾಗ ಆತುರದಲ್ಲಿ ಅವರು ಈ ಅವಾಂತರ ಮಾಡಿಕೊಂಡಿದ್ದಾರೆ. ತಾವು ತಿಂದಿದ್ದು ಚಿಕನ್ ಎಂಬುದು ಗೊತ್ತಾದ ಬಳಿಕ ಕೂಡಲೇ ಹೋಗಿ ಬಾಯಿ ತೊಳೆದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಧನರಾಜ್ ಅವರ ಗಲಿಬಿಲಿ ಕಂಡು ಭವ್ಯಾ ಗೌಡ, ರಜತ್, ಮೋಕ್ಷಿತಾ ಮುಂತಾದವರು ಬಿದ್ದು ಬಿದ್ದು ನಕ್ಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos