ಮೋಸದಿಂದ ಕೊನೆಯ ಕ್ಯಾಪ್ಟನ್ ಆದ್ರಾ ಧನುಷ್? ಬಿಗ್ ಬಾಸ್ ಪ್ರಶ್ನೆ
ಬಿಗ್ ಬಾಸ್ ಮನೆಯಲ್ಲಿ ಈ ವಾರ ಬಂಪರ್ ಅವಕಾಶ ಸಿಕ್ಕಿದೆ. ಕೊನೆಯ ಕ್ಯಾಪ್ಟನ್ ಯಾರು ಆಗುತ್ತಾರೆ ಎನ್ನುವ ಪ್ರಶ್ನೆ ಮೂಡಿತ್ತು. ಕೊನೆಗೂ ಉತ್ತರ ಸಿಕ್ಕಿದೆ. ಧನುಷ್ ಅವರು ಕ್ಯಾಪ್ಟನ್ ಏನೋ ಆಗಿದ್ದಾರೆ. ಆದರೆ, ಅದು ಮೋಸದಿಂದವೇ ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡಿದೆ.
ಬಿಗ್ ಬಾಸ್ ಮನೆಯ 12ನೇ ಸೀಸನ್ನ ಕೊನೆಯ ಕ್ಯಾಪ್ಟನ್ ಆಗಿ ಧನುಷ್ ಹೊರ ಹೊಮ್ಮಿದ್ದಾರೆ. ಈ ಆಟವನ್ನು ಅವರು ನಿಯಮ ಪಾಲಿಸದೆ ಮೋಸದಿಂದ ಗೆದ್ದರೇ ಎನ್ನುವ ಪ್ರಶ್ನೆ ಮೂಡಿದೆ. ಈ ಬಗ್ಗೆ ಬಿಗ್ ಬಾಸ್ ಪ್ರಶ್ನೆ ಮಾಡಿದ್ದಾರೆ. ಅಶ್ವಿನಿ ಹಾಗೂ ಧನುಷ್ ಮಧ್ಯೆ ಕೊನೆಯ ಟಾಸ್ಕ್ ನಡೆದಿದೆ. ಅದು ಪಜಲ್ ಟಾಸ್ಕ್ ಆಗಿತ್ತು. ಸಂಪೂರ್ಣ ಫಲಿತಾಂಶ ನೋಡಲು ಇಂದಿನ ಎಪಿಸೋಡ್ ವೀಕ್ಷಿಸಬೇಕು. ಮೇಲ್ಭಾಗದಲ್ಲಿ ಬಿಗ್ ಬಾಸ್ ಪ್ರೋಮೋ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Jan 02, 2026 08:24 AM
