ನಾನು-ರಾಗಿಣಿ ಜೋಡಿ ಅಲ್ಲ: ಎಲ್ಲರ ಎದುರು ಸ್ಪಷ್ಟಪಡಿಸಿದ ಧರ್ಮ ಕೀರ್ತಿರಾಜ್

Updated on: Apr 30, 2025 | 10:47 PM

‘ಸಿಂಧೂರಿ’ ಸಿನಿಮಾಗೆ ಚಾಲನೆ ನೀಡಲಾಗಿದೆ. ಈ ವೇಳೆ ನಟ ಧರ್ಮ ಕೀರ್ತಿರಾಜ್ ಅವರು ರಾಗಿಣಿ ದ್ವಿವೇದಿ ಬಗ್ಗೆ ಸ್ಪಷ್ಟನೆ ನೀಡಿದರು. ‘ಬಿಗ್ ಬಾಸ್ ಕನ್ನಡ’ ಶೋನಲ್ಲಿ ಭಾಗವಹಿಸಿ ಬಂದ ಬಳಿಕ ಧರ್ಮ ಕೀರ್ತಿರಾಜ್ ಅವರಿಗೆ ಬೇಡಿಕೆ ಜಾಸ್ತಿ ಆಗಿದೆ. ‘ಸಿಂಧೂರಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಧರ್ಮ ಕೀರ್ತಿರಾಜ್ ಮಾತನಾಡಿದ ವಿಡಿಯೋ ಇಲ್ಲಿದೆ..

‘ಸಿಂಧೂರಿ’ (Sindhuri) ಚಿತ್ರಕ್ಕೆ ಚಾಲನೆ ಸಿಕ್ಕಿದೆ. ಈ ವೇಳೆ ನಟ ಧರ್ಮ ಕೀರ್ತಿರಾಜ್ ಮಾತನಾಡಿ ರಾಗಿಣಿ ದ್ವಿವೇದಿ (Ragini Dwivedi) ಮತ್ತು ತಮ್ಮ ಕಾಂಬಿನೇಷನ್ ಬಗ್ಗೆ ಒಂದು ಸ್ಪಷ್ಟನೆ ನೀಡಿದರು. ‘ಅಕ್ಷಯ ತೃತೀಯ ದಿನ ಮುಹೂರ್ತ ಆಗಿದ್ದಕ್ಕೆ ಖುಷಿ ಆಗಿದೆ. ಈ ದಿನ ಬಂಗಾರ ತಗೋಬೇಕು ಎನ್ನುತ್ತಾರೆ. ಆದರೆ ನನಗೆ ಇಂದು ನಿರ್ಮಾಪಕರು ಬಂಗಾರ ಕೊಟ್ಟಷ್ಟೇ ಖುಷಿಯಾಗಿದೆ. ಈ ಸಿನಿಮಾದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ನನ್ನ ಮತ್ತು ರಾಗಿಣಿ ನಡುವೆ ಹಗ್ಗ ಜಗ್ಗಾಟ ಇರುತ್ತದೆ. ಆದರೆ ನಾವು ಜೋಡಿ ಅಲ್ಲ’ ಎಂದು ಅವರು ಸ್ಪಷ್ಟಪಡಿಸಿದರು. ‘ಬಿಗ್ ಬಾಸ್ ಕನ್ನಡ’ ಶೋನಲ್ಲಿ ಭಾಗವಹಿಸಿ ಬಂದ ಬಳಿಕ ಧರ್ಮ ಕೀರ್ತಿರಾಜ್ (Dharma Keerthiraj) ಅವರಿಗೆ ಬೇಡಿಕೆ ಜಾಸ್ತಿ ಆಗಿದೆ. ‘ಸಿಂಧೂರಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಧರ್ಮ ಕೀರ್ತಿರಾಜ್ ಮಾತನಾಡಿದ ವಿಡಿಯೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.