’ರಾಜಯೋಗ’ ಸಿನಿಮಾದಲ್ಲಿ ಧರ್ಮಣ್ಣನ ಮಾತ್ರವಲ್ಲ ಇದ್ದಾರೆ ಇನ್ನೂ ಇಬ್ಬರು ನಾಯಕರು
Rajayoga: ನಟ ಧರ್ಮಣ್ಣ ’ರಾಜಯೋಗ’ ಸಿನಿಮಾದ ಮೂಲಕ ನಾಯಕ ನಟನಾಗಿ ಬಡ್ತಿ ಪಡೆದಿದ್ದಾರೆ. ಆದರೆ ಈ ಸಿನಿಮಾದಲ್ಲಿ ಇನ್ನೂ ಇಬ್ಬರು ನಾಯಕರು ಇದ್ದಾರೆ ಎಂದಿದ್ದಾರೆ. ಅವರ್ಯಾರು?
ಹಾಸ್ಯ ನಟ, ಪೋಷಕ ನಟನಾಗಿ ಜನಪ್ರಿಯವಾಗಿರುವ ಧರ್ಮಣ್ಣ ಕಡೂರು (Dharmanna Kaduru), ಇದೀಗ ‘ರಾಜಯೋಗ’ ಸಿನಿಮಾದ ಮೂಲಕ ನಾಯಕ ನಟನಾಗಿ ಬಡ್ತಿ ಪಡೆದಿದ್ದಾರೆ. ಸಿನಿಮಾದ ಟ್ರೈಲರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದ್ದು, ಮೆಚ್ಚುಗೆ ಧಕ್ಕಿಸಿಕೊಂಡಿದೆ. ಸಿನಿಮಾ ಸಂಬಂಧ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸಿನಿಮಾದ ಬಗ್ಗೆ ಮಾತನಾಡಿದ ಧರ್ಮಣ್ಣ, ನಮ್ಮ ಸಿನಿಮಾದಲ್ಲಿ ಇಬ್ಬರು ನಾಯಕರು, ಕತೆ ಮತ್ತು ನಿರ್ದೇಶಕ ಎಂದರು. ನಾನು ಒಂದು ಪಾತ್ರವಷ್ಟೆ. ಇಲ್ಲಿ ನಾಯಕ ಸಿನಿಮಾದ ಕತೆ ಎಂದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ