ಮುಖ್ಯಮಂತ್ರಿ ತವರು ಜಿಲ್ಲೆಯ ಇಂಜಿನೀಯರಿಂಗ್ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಲ್ಲಿ ಹುಳು-ಮಿಶ್ರಿತ ಊಟ! ರೊಚ್ಚಿಗೆದ್ದು ಬೀದಿಗಿಳಿದ ವಿದ್ಯಾರ್ಥಿಗಳು
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಖಾತೆ ಸಚಿವ ಹೆಚ್ ಸಿ ಮಹದೇವಪ್ಪನವರ ತವರು ಜಿಲ್ಲೆ. ಸಿದ್ದರಾಮಯ್ಯ ಎಷ್ಟು ಪ್ರಭಾವಶಾಲಿ ನಾಯಕ ಅಂತ ಎಲ್ಲರಿಗೂ ಗೊತ್ತು. ಆದರೆ ಈ ಹಾಸ್ಟೆಲ್ ವಾರ್ಡನ್ ಗೆ ಮಾತ್ರ ಗೊತ್ತಿಲ್ಲ ಅನಿಸುತ್ತೆ. ಗೊತ್ತಿದ್ದರೆ ಅವನು ಓದುವ ಮಕ್ಕಳಿಗೆ ಹುಳು ಬಿದ್ದ ಆಹಾರ ನೀಡುವ ದುಸ್ಸಾಹಕ್ಕಿಳಿಯುತ್ತಿರಲಿಲ್ಲ.
ಮೈಸೂರು: ನಗರದ ಜಯಚಾಮರಾಜೇಂದ್ರ ಇಂಜಿನೀಯರಿಂಗ್ ಕಾಲೇಜಿನಲ್ಲಿ (Jayachamarajendra Engineering College) ಓದುವ ವಿದ್ಯಾರ್ಥಿಗಳು (students) ತಾವು ವಾಸವಾಗಿರುವ ಹಾಸ್ಟೆಲ್ ನಲ್ಲಿ ಒದಗಿಸುತ್ತಿರುವ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಬೇಸತ್ತು, ರೊಚ್ಚಿಗೆದ್ದು ಬೀದಿಗಿಳಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಗುರುವಾರ ರಾತ್ರಿ ತಮ್ಮ ಹಾಸ್ಟೆಲ್ ವಾರ್ಡನ್ (hostel warden) ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಸುತ್ತಿರುವ ದೃಶ್ಯಗಳನ್ನು ಇಲ್ಲಿ ನೋಡಬಹುದು. ಹುಳು ಮಿಶ್ರಿತ, ಪ್ರಾಣಿಗಳು ಸಹ ತಿನ್ನಲು ಯೋಗ್ಯವಲ್ಲದ ಆಹಾರ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಹೇಳಿದರು. ನೆನಪಿರಲಿ, ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಖಾತೆ ಸಚಿವ ಹೆಚ್ ಸಿ ಮಹದೇವಪ್ಪನವರ ತವರು ಜಿಲ್ಲೆ. ಸಿದ್ದರಾಮಯ್ಯ ಎಷ್ಟು ಪ್ರಭಾವಶಾಲಿ ನಾಯಕ ಅಂತ ಎಲ್ಲರಿಗೂ ಗೊತ್ತು. ಆದರೆ ಈ ಹಾಸ್ಟೆಲ್ ವಾರ್ಡನ್ ಗೆ ಮಾತ್ರ ಗೊತ್ತಿಲ್ಲ ಅನಿಸುತ್ತೆ. ಗೊತ್ತಿದ್ದರೆ ಅವನು ಓದುವ ಮಕ್ಕಳಿಗೆ ಹುಳು ಬಿದ್ದ ಆಹಾರ ನೀಡುವ ದುಸ್ಸಾಹಕ್ಕಿಳಿಯುತ್ತಿರಲಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವ ಮಹಾದೇವಪ್ಪ ಅವರಿಗೂ ವಿಷಯ ಗೊತ್ತಿಲ್ಲವೇ? ಮಹನೀಯರೇ, ನಿಮ್ಮ ಕೆಲಸಗಳನ್ನು ಬದಿಗಿಟ್ಟು ನಿಮ್ಮ ಮೂಗಿನ ಕೆಳಗೆ ಆಗುತ್ತಿರುವ ಅನಾಚಾರವನ್ನು ತಡೆಯಿರಿ. ಈಗರುವ ವಾರ್ಡನ್ ಅನ್ನು ಮನೆಗೆ ಕಳಿಸಿ, ವಿದ್ಯಾರ್ಥಿಗಳ ಬಗ್ಗೆ ಕಾಳಜಿ, ಪ್ರೀತಿ ಇರುವ ವಾರ್ಡನ್ ಅನ್ನು ನೇಮಕ ಮಾಡಿ. ಹಾಸ್ಟೆಲನ್ನು ಕಾಲೇಜಿನವರೇ ನಡೆಸುತ್ತಿದ್ದರೆ ಅದರ ಆಡಳಿತ ಮಂಡಳಿಗೆ ತಾಕೀತು ಮಾಡಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ