ನೋಟಿಸ್ ಕೊಡದಿದ್ದರೂ ನಸುಕಿನ ಜಾವ 5 ಗಂಟೆಗೆ SIT ಕಚೇರಿಗೆ ಬಂದು ಕುಳಿತ ಸುಜಾತಾ ಭಟ್

Updated on: Aug 26, 2025 | 3:04 PM

ಸುಜಾತಾ ಭಟ್ ಇಂದು ಇಂದು (ಆಗಸ್ಟ್ 26) ನಸುಕಿನ ಜಾವ 5 ಗಂಟೆ ಏಕಾಏಕಿ ಬೆಳ್ತಂಗಡಿಯ ಎಸ್​​ಐಟಿ ಕಚೇರಿ ಬಂದಿದ್ದು, ಅಧಿಕಾರಿಗಳನ್ನು ಎಬ್ಬಿಸಿ ವಿಚಾರಣೆ ನಡೆಸುವಂತೆ ಪಟ್ಟು ಹಿಡಿದಿದ್ದಾರೆ. ವಿಚಾರಣೆ ಬರಲು ನಿಮಗೆ ನೋಟಿಸ್ ಕೊಟ್ಟಿಲ್ಲ. ನೀವು ಇಲ್ಲಿಂದ ಹೊರಡಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೂ ಪಟ್ಟು ಬಿಡಿದ ಸುಜಾತಾ ಭಟ್ ವಿಚಾರಣೆ ನಡೆಸಬೇಕೆಂದು ಹಠಕ್ಕೆ ಬಿದ್ದಿದ್ದಾಳೆ. ಕೊನೆಗೆ ವಿಧಿಯಿಲ್ಲದೇ ಎಸ್​ಐಟಿ ಮುಖ್ಯಸ್ಥ ಪ್ರಣಬ್ ಮೋಹಂತಿ ಸೂಚನೆ ಮೇರೆಗೆ ಎಸ್ಐಟಿ PSI ಗುಣಪಾಲ್ ಅವರು ಸುಜಾತಾ ಭಟ್ ಅವರನ್ನು ವಿಚಾರಣೆ ನಡೆಸಿದ್ದಾರೆ.

ಮಂಗಳೂರು, (ಆಗಸ್ಟ್ 26): ಮಗಳು ಅನನ್ಯ ಭಟ್ ಧರ್ಮಸ್ಥಳದಿಂದ ಕಾಣೆಯಾಗಿದ್ದಾಳೆ ಎಂದು ತಾಯಿ ಸುಜಾತಾ ಭಟ್ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ಎಸ್​​ಐಟಿಗೆ ದೂರು ಸಹ ನೀಡಿದ್ದಾರೆ. ಆದ್ರೆ, ತನಿಖೆಯಲ್ಲಿ ಅನನ್ಯ ಭಟ್ ಮಗಳೇ ಇರಲಿಲ್ಲ ಎನ್ನುವ ಅಂಶಗಳು ಹೊರಬಂದಿವೆ. ಇನ್ನೊಂದೆಡೆ ಸುಜಾತಾ ಭಟ್ ಸಹ ಕ್ಷಣಕ್ಕೊಂದು ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಪ್ರಕರಣವೇ ಸುಳ್ಳು ಎನ್ನುವ ರೀತಿಯಾಗಿದ್ದು, ಇದೀಗ ಸುಜಾತಾ ಭಟ್ ಇಂದು ಇಂದು (ಆಗಸ್ಟ್ 26) ನಸುಕಿನ ಜಾವ 5 ಗಂಟೆ ಏಕಾಏಕಿ ಬೆಳ್ತಂಗಡಿಯ ಎಸ್​​ಐಟಿ ಕಚೇರಿ ಬಂದಿದ್ದು, ಅಧಿಕಾರಿಗಳನ್ನು ಎಬ್ಬಿಸಿ ವಿಚಾರಣೆ ನಡೆಸುವಂತೆ ಪಟ್ಟು ಹಿಡಿದಿದ್ದಾರೆ. ವಿಚಾರಣೆ ಬರಲು ನಿಮಗೆ ನೋಟಿಸ್ ಕೊಟ್ಟಿಲ್ಲ. ನೀವು ಇಲ್ಲಿಂದ ಹೊರಡಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೂ ಪಟ್ಟು ಬಿಡಿದ ಸುಜಾತಾ ಭಟ್ ವಿಚಾರಣೆ ನಡೆಸಬೇಕೆಂದು ಹಠಕ್ಕೆ ಬಿದ್ದಿದ್ದಾಳೆ. ಕೊನೆಗೆ ವಿಧಿಯಿಲ್ಲದೇ ಎಸ್​ಐಟಿ ಮುಖ್ಯಸ್ಥ ಪ್ರಣಬ್ ಮೋಹಂತಿ ಸೂಚನೆ ಮೇರೆಗೆ ಎಸ್ಐಟಿ PSI ಗುಣಪಾಲ್ ಅವರು ಸುಜಾತಾ ಭಟ್ ಅವರನ್ನು ವಿಚಾರಣೆ ನಡೆಸಿದ್ದಾರೆ.

Published on: Aug 26, 2025 02:59 PM