ಮುಸ್ಲಿಂ ಯುವತಿಯನ್ನು ಲಗ್ನವಾದರೆ ಹಣ ಕೊಡ್ತೀನಿ ಅನ್ನೋದು ಯತ್ನಾಳ್ರ ಕೀಳು ಮನಸ್ಥಿತಿ: ಶಿವರಾಜ್ ತಂಗಡಿಗಿ
ಯತ್ನಾಳ್ ಮಾತಾಡಿದ್ದು ಒಳ್ಳೆಯ ಬೆಳವಣಿಗೆ ಅಲ್ಲ, ಎಲ್ಲರ ಮನೆಗಳಲ್ಲೂ ಹೆಣ್ಣುಮಕ್ಕಳಿರುತ್ತಾರೆ, ಯಾರನ್ನೂ ಕೇವಲವಾಗಿ ಕಾಣೋದು ಸರಿಯಲ್ಲ, ಧರ್ಮ ಮತ್ತು ಜಾತಿ ವ್ಯವಸ್ಥೆ ಮೊದಲಿಂದ ನಡೆದುಕೊಂಡು ಬಂದಿದೆ, ಯಾವುದೇ ಧರ್ಮ ಅಥವಾ ಜಾತಿ ಮತ್ತೊಂದಕ್ಕಿಂತ ದೊಡ್ಡದಲ್ಲ, ಚಿಕ್ಕದಲ್ಲ; ನಮ್ಮ ವ್ಯವಸ್ಥೆಯಲ್ಲಿ ಎಲ್ಲ ಜಾತಿಗಳು ಸಮ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿಗಿ ಹೇಳಿದರು.
ಕೊಪ್ಪಳ, ಆಗಸ್ಟ್ 26: ಮುಸ್ಲಿಂ ಸಮಾಜದ ಯುವತಿಯನ್ನು ಮದುವೆಯಾದರೆ ರೂ. 5 ಲಕ್ಷ ಕೊಡುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿರುವುದನ್ನು ಸಚಿವ ಶಿವರಾಜ್ ತಂಗಡಿಗಿ ತೀವ್ರವಾಗಿ ಖಂಡಿಸಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಯತ್ನಾಳ್ ಗೆ ಮಹಿಳೆಯರ ಬಗ್ಗೆ ಗೌರವ ಇಲ್ಲ ಅನ್ನೋದು ಇದರಿಂದ ಸ್ಪಷ್ಟವಾಗುತ್ತದೆ, ಅದ್ಯಾವ ನೈತಿಕತೆಯಿಂದ ಅವರು ಹೀಗೆಲ್ಲ ಮಾತಾಡುತ್ತಾರೆ? ದುಡ್ಡು ಇವರ ಬಳಿ ಮಾತ್ರ ಇದೆ ಅಂದುಕೊಂಡಿದ್ದಾರಾ? ಬೇರೆ ಜಾತಿ ಮತ್ತು ಧರ್ಮದ ಹೆಣ್ಣುಮಕ್ಕಳ ವಿಷಯದಲ್ಲಿ ಕೀಳಾಗಿ ಮಾತಾಡುವುದನ್ನು ದೇಶ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಒಪ್ಪಲ್ಲ ಎಂದು ಹೇಳಿದರು.
ಇದನ್ನೂ ಓದಿ: Karnataka Assembly session; ಎಲ್ಲ ಮುಖ್ಯಮಂತ್ರಿಗಳು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದ್ದಾರೆ: ಯತ್ನಾಳ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

