Karaga Utsav Concludes: ಐತಿಹಾಸಿಕ ಬೆಂಗಳೂರು ಕರಗ ಶಕ್ತ್ಯೋತ್ಸದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರೂ ಪಾಲ್ಗೊಂಡರು!
ಬೇರೆ ಬೇರೆ ಊರು ಮತ್ತು ಪಕ್ಕದ ರಾಜ್ಯಗಳಿಂದ ಬಂದ‘ ಸಹಸ್ರಾರು ಕರಗ ಉತ್ಸವದಲ್ಲಿ ಪಾಲ್ಗೊಂಡರು. ತಿಗಳ ಸಮುದಾಯದ ಅರ್ಚಕ ವಿ ಜ್ಞಾನೇಂದ್ರ ಈ ಸಲವೂ ಕರಗವನ್ನು ಹೊತ್ತರು.
ಬೆಂಗಳೂರು: ನಗರದಲ್ಲಿ ಪ್ರತಿವರ್ಷ ನಡೆಯುವ ಐತಿಹಾಸಿಕ ಕರಗ ಶಕ್ತ್ಯೋತ್ಸದಲ್ಲಿ (Karaga Utsav) ಪಾಲ್ಗೊಳ್ಳಲು ಕೇವಲ ನಗರ ನಿವಾಸಿಗಳು ಮಾತ್ರವಲ್ಲ, ಬೇರೆ ಬೇರೆ ಊರುಗಳಿಂದ, ಪಕ್ಕದ ರಾಜ್ಯಗಳಿಂದಲೂ ಸಹಸ್ರಾರು ಜನ ಅಗಮಿಸುತ್ತಾರೆ. ಗುರುವಾರ ರಾತ್ರಿ ನಗರದ ಬೀದಿಗಳಲ್ಲಿ ಕರಗ ಉತ್ಸವ ಅತ್ಯಂತ ವಿಜೃಂಭಣೆ ಮತ್ತು ಭಕ್ತಿ ಶ್ರದ್ಧೆಗಳಿಂದ ನಡೆಯಿತು. ರಸ್ತೆಯುದ್ದಕ್ಕೂ ನೆರೆದಿದ್ದ ಲಕ್ಷಾಂತರ ಭಕ್ತರ ನಡುವೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರು (Dr Veerendra Heggade) ಕಾಣಿಸಿಕೊಂಡಿದ್ದು ಈ ಬಾರಿ ಕರಗ ಉತ್ಸವದ ಮತ್ತೊಂದು ವಿಶೇಷತೆಯಾಗಿತ್ತು. ತಿಗಳ ಸಮುದಾಯದ ಅರ್ಚಕ ವಿ ಜ್ಞಾನೇಂದ್ರ (V Jnanendra) ಈ ಸಲವೂ ಕರಗವನ್ನು ಹೊತ್ತರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos