Dharmasthala Mask Man arrested; ತನಿಖೆ ಪೂರ್ಣಗೊಂಡು ವರದಿ ಕೈಸೇರುವವರೆಗೆ ಏನನ್ನೂ ಹೇಳಲ್ಲ: ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ

Updated on: Aug 23, 2025 | 12:50 PM

Dharmasthala Mask Man arrested: ಸರ್ಕಾರದ ಪ್ರತಿನಿಧಿಗಳಾಗಿರುವವರು ಈಗ ಹೇಳಿಕೆಗಳನ್ನು ನೀಡಿದರೆ ಅದು ಎಸ್ಐಟಿ ಅಧಿಕಾರಿಗಳು ನಡೆಸುತ್ತಿರುವ ತನಿಖೆಯ ಮೇಲೆ ಪ್ರಭಾವ ಬೀರುತ್ತದೆ, ಅಧಿಕಾರಿಗಳು ಕಷ್ಟಪಟ್ಟು ತನಿಖೆ ಮಾಡುತ್ತಿದ್ದಾರೆ, ಬೆಳವಣಿಗೆಗಳು ಏನೇ ನಡೆಯಲಿ, ಸರ್ಕಾರಕ್ಕೆ ಎಸ್​ಐಟಿ ನೀಡುವ ವರದಿ ಅಂತಿಮ ಎಂದು ಪರಮೇಶ್ವರ್ ಹೇಳಿದರು.

ಉಡುಪಿ, ಆಗಸ್ಟ್ 23: ಮುಸುಕುಧಾರಿ ವ್ಯಕ್ತಿ ಸಿಎನ್ ಚಿನ್ನಯ್ಯ (CM Chinnaiah) ಬಂಧನದ ಬಳಿಕ ಉಡುಪಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಜಿ ಪರಮೇಶ್ವರ್ ಅವರು ತನಿಖೆ ಇನ್ನೂ ಜಾರಿಯಲ್ಲಿರುವುದರಿಂದ ಈಗ ಯಾವ ವಿಷಯವನ್ನೂ ಬಹಿರಂಗಡಿಸಲಾಗದು, ಷಡ್ಯಂತ್ರ ನಡೆದಿದೆಯಾ? ಇದರ ಹಿಂದೆ ಜಾಲ ಇದೆಯಾ ಅನ್ನೋದು ಎಸ್ಐಟಿ ತನಿಖೆ ಪೂರ್ಣಗೊಂಡ ನಂತರವೇ ಗೊತ್ತಾಗಬೇಕು ಎಂದು ಹೇಳಿದರು, ಬೇರೆ ಯಾರ‍್ಯಾರೋ ಅಡುತ್ತಿರುವ ಮಾತುಗಳನ್ನು ಆಧರಿಸಿ ಹೇಳಿಕೆಯನ್ನು ನೀಡಲಾಗಲ್ಲ, ತನಿಖೆ ಪೂರ್ಣಗೊಂಡು ವರದಿ ನಮ್ಮ ಕೈಸೇರಿದ ನಂತರ ಅಧಿಕೃತ ಹೇಳಿಕೆಗಳನ್ನು ನೀಡಬಹುದು, ಊಹಾಪೋಹಗಳನ್ನು ನಂಬಿ ಮಾತಾಡುವುದಿಲ್ಲ ಎಂದು ಪರಮೇಶ್ವರ್ ಹೇಳಿದರು.

ಇದನ್ನೂ ಓದಿ:  ಧರ್ಮಸ್ಥಳ ಮಾಸ್ಕ್​ಮ್ಯಾನ್ ಬಂಧನ; ನಮ್ಮ ಸರ್ಕಾರ ಯಾರ ಪರವೂ ಅಲ್ಲ, ಕೇವಲ ನ್ಯಾಯದ ಪರ: ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.