ಧರ್ಮಸ್ಥಳಕ್ಕೆ ಕಳಂಕ ತರಲು ಬುರುಡೆ ಗ್ಯಾಂಗ್ ಹುನ್ನಾರ: 200 ಕೋಟಿ ಬಜೆಟ್ ಇಟ್ಟುಕೊಂಡು ಷಡ್ಯಂತ್ರ

Updated on: Jun 11, 2026 | 10:22 PM

ಧರ್ಮಸ್ಥಳ ಬುರುಡೆ ಕೇಸ್‌ನ ಮತ್ತೊಂದು ಸ್ಫೋಟಕ ಸಂಗತಿ ಹೊರಬಿದ್ದಿದೆ. ಬುರುಡೆ ಗ್ಯಾಂಗ್ ಹೇಗೆಲ್ಲ ಸಂಚು ರೂಪಿಸಿತ್ತು ಎಂಬ ವಿಚಾರ ಬಯಲಾಗಿದೆ. ಬುರುಡೆ ಚಿನ್ನಯ್ಯ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯಲ್ಲಿ ಹಲವು ಸ್ಫೋಟಕ ಸಂಗತಿ ಹೊರಬಿದ್ದಿದೆ. ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಹೆಸರು ಉಲ್ಲೇಖಿಸಿರೋ ಚಿನ್ನಯ್ಯ, ಪ್ರಕಾಶ್ ರಾಜ್ ಮಾತನಾಡಿರೋದ ಸಂಗತಿಯನ್ನ ಉಲ್ಲೇಖಿಸಿದ್ದಾನೆ.

ಬೆಂಗಳೂರು,( ಜೂನ್ 11): ಧರ್ಮಸ್ಥಳ ಬುರುಡೆ ಕೇಸ್‌ನ ಮತ್ತೊಂದು ಸ್ಫೋಟಕ ಸಂಗತಿ ಹೊರಬಿದ್ದಿದೆ. ಬುರುಡೆ ಗ್ಯಾಂಗ್ ಹೇಗೆಲ್ಲ ಸಂಚು ರೂಪಿಸಿತ್ತು ಎಂಬ ವಿಚಾರ ಬಯಲಾಗಿದೆ. ಬುರುಡೆ ಚಿನ್ನಯ್ಯ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯಲ್ಲಿ ಹಲವು ಸ್ಫೋಟಕ ಸಂಗತಿ ಹೊರಬಿದ್ದಿದೆ. ಅರ್ಜಿಯಲ್ಲಿ ನಟ ಪ್ರಕಾಶ್ ರಾಜ್ ಹೆಸರು ಉಲ್ಲೇಖಿಸಿರೋ ಚಿನ್ನಯ್ಯ, ಪ್ರಕಾಶ್ ರಾಜ್ ಮಾತನಾಡಿರೋದ ಸಂಗತಿಯನ್ನ ಉಲ್ಲೇಖಿಸಿದ್ದಾನೆ.

ಚಿನ್ನಯ್ಯ ರಿಟ್ ಅರ್ಜಿಯಲ್ಲಿ ಏನಿದೆ
‘ಒಂದು ದಿನ ರಾತ್ರಿ ಸುಮಾರು 8:00 ಗಂಟೆಗೆ, ಗಿರೀಶ್ ಮಟ್ಟಣ್ಣವರ್ ನಟ ಪ್ರಕಾಶ್ ರಾಜ್ ಅವರಿಗೆ ದೂರವಾಣಿ ಕರೆ ಮಾಡಿ ನನಗೆ ಫೋನ್ ನೀಡಿದರು. ಪ್ರಕಾಶ್ ರಾಜ್ ಅವರು ತಮಿಳಿನಲ್ಲಿ ಮಾತನಾಡಿ, ಗಿರೀಶ್ ಮಟ್ಟಣ್ಣವರ್ ಅವರು ಏನು ಹೇಳಬೇಕೆಂದು ಸೂಚಿಸಿದ್ದಾರೋ ಅದನ್ನು ಅಧಿಕಾರಿಗಳ ಮುಂದೆ ಹೇಳಬೇಕು. ಅವರು ಹೇಳಿದಂತೆ ಕೇಳಿದರೆ ಜೂನ್ 29 ರಂದು ಬಂದು ಅಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದರು. ಹೀಗೆಂದು ಹೇಳಿದ್ದಾಗಿ ನಟ ಪ್ರಕಾಶ್ ರಾಜ್ ಹೆಸರು ಉಲ್ಲೇಖಿಸಿ ಚಿನ್ನಯ್ಯ ರಿಟ್ ಅರ್ಜಿಯಲ್ಲಿ ತಿಳಿಸಿದ್ದಾನೆ. ಅಷ್ಟೇ ಅಲ್ಲ, ಈ ಷಡ್ಯಂತ್ರಕ್ಕಾಗಿ ನಡೆದಿದ್ದು ಬರೋಬ್ಬರಿ 200 ಕೋಟಿ ವಹಿವಾಟು ಅಂತಾ ಸ್ಫೋಟಕ ಸಂಗತಿಯನ್ನ ಉಲ್ಲೇಖಿಸಿದ್ದಾನೆ.

ಧರ್ಮಸ್ಥಳಕ್ಕೆ ಕಳಂಕ ತರಲು ಬುರುಡೆ ಗ್ಯಾಂಗ್‌ ಹುನ್ನಾರ ಮಾಡಿರೋದು ಚಿನ್ನಯ್ಯನ ರಿಟ್ ಅರ್ಜಿಯಲ್ಲಿ ಬಯಲಾಗಿದೆ. 200 ಕೋಟಿ ಬಜೆಟ್ ಇಟ್ಕೊಂಡು ಗ್ಯಾಂಗ್ ಷಡ್ಯಂತ್ರ ಮಾಡಿತ್ತಂತೆ. ಷಡ್ಯಂತ್ರಕ್ಕೆ ಅಂತಾರಾಜ್ಯ ಮಟ್ಟದ ಆರ್ಥಿಕ ವಹಿವಾಟು ನಡೆದಿದೆ ಎಂದಿದ್ದಾನೆ. ಅಷ್ಟೇ ಅಲ್ಲ, ಷಡ್ಯಂತ್ರ ಸಕ್ಸಸ್ ಆದ್ರೆ 50 ಲಕ್ಷ ಕೊಡ್ತೀನಿ ಅಂತಾ ಆಮಿಷ ವೊಡ್ಡಿದ್ರು ಅಂತಾ ಚಿನ್ನಯ್ಯ ರಿಟ್ ಅರ್ಜಿಯಲ್ಲಿ ಹೇಳಿಕೊಂಡಿದ್ದಾನೆ.) ತಿಮರೋಡಿ, ಮಟ್ಟಣ್ಣವರ್, ವಿಠಲಗೌಡ, ಜಯಂತ್ ಷಡ್ಯಂತ್ರದ ರೂವಾರಿಗಳು. ನಿಜವಾದ ಆರೋಪಿಗಳ ಹೆಸರು ಹೇಳಿದ್ರೂ ಎಸ್‌ಐಟಿ ಕ್ರಮ ಕೈಗೊಂಡಿಲ್ಲ ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ವಿಚಾರಣೆಯನ್ನ ಜೂನ್ 29ಕ್ಕೆ ಮುಂದೂಡಿದ ಹೈಕೋರ್ಟ್ ಮುಂದೂಡಿದೆ.

Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More