ನೂರಾರು ಶವ ಹೂತಿಟ್ಟ ಪ್ರಕರಣ: ಧರ್ಮಸ್ಥಳ ಠಾಣೆಯಲ್ಲಿ 1995 ರಿಂದ ಕೆಲಸ ಮಾಡಿದ ಪೊಲೀಸರ ಪಟ್ಟಿ ಕೇಳಿದ ಎಸ್​ಐಟಿ

Updated By: Ganapathi Sharma

Updated on: Jul 30, 2025 | 11:50 AM

ಧರ್ಮಸ್ಥಳದ ಪರಿಸರದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ, 1995 ರಿಂದ ಈವರೆಗೆ ಧರ್ಮಸ್ಥಳ ಔಟ್ ಪೋಸ್ಟ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸಿದ ಪೊಲೀಸರ ಪಟ್ಟಿ ಕೋರಿದೆ. ಮತ್ತೊಂದಡೆ, ಶವಗಳ ಶೋಧ ಕಾರ್ಯ ಇಂದೂ ಮುಂದುವರಿದಿದೆ. ಪ್ರಕರಣದ ವಿಡಿಯೋ ವರದಿ ಇಲ್ಲಿದೆ.

ಮಂಗಳೂರು, ಜುಲೈ 30: ಧರ್ಮಸ್ಥಳ ಆಸುಪಾಸಿನಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡದ ಶೋಧ ಕಾರ್ಯ ಹಾಗೂ ತನಿಖೆ ತೀವ್ರಗೊಂಡಿದೆ. ಒಂದೆಡೆ, ದೂರುದಾರ ತಿಳಿಸಿರುವ ಸ್ಥಳಗಳಲ್ಲಿ ಶವಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದರೆ, ಮತ್ತೊಂದೆಡೆ, 1995 ರಿಂದ ಈವರೆಗೆ ಧರ್ಮಸ್ಥಳ ಔಟ್ ಪೋಸ್ಟ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದವರ ಪಟ್ಟಿ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಎಸ್​​ಪಿಗೆ ಎಸ್​ಐಟಿ ಮನವಿ ಮಾಡಿದೆ.

ಮತ್ತೊಂದೆಡೆ, ಹೂತಿಡಲಾಗಿತ್ತು ಎನ್ನಲಾದ ಶವಗಳ ಶೋಧಕ್ಕೆ ಉತ್ಖನನ ಕಾರ್ಯ ಆರಂಭವಾಗಿದೆ. ಎರಡನೇ ದಿನವಾದ ಬುಧವಾರ ಬೆಳಗ್ಗೆ ಸಮಾಧಿ ಇರುವ ಸ್ಥಳಕ್ಕೆ ಎಸ್​ಐಟಿ ತಂಡ ತೆರಳಿದಾಗ ಮಳೆ ಬಂದಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಯಿತು. ನಂತರದಲ್ಲಿ ಇದೀಗ ಸಮಾಧಿ ಅಗೆಯುವ ಕಾರ್ಯ ಆರಂಭವಾಗಿದೆ. ಸದ್ಯಕ್ಕೆ ಒಂದೇ ಕಡೆ ಸಮಾಧಿ ಅಗೆಯಲು ಎಸ್​ಐಟಿ ತಂದ ನಿರ್ಧರಿಸಿದೆ. 30 ಸಿಬ್ಬಂದಿ ಜೊತೆ 20 ಜನ ಪೌರ ಕಾರ್ಮಿಕರಿಂದ ಉತ್ಖನನ ನಡೆಯುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Jul 30, 2025 11:47 AM