ಧರ್ಮೋ ರಕ್ಷತಿ ರಕ್ಷಿತಃ ಎಂದು ಬರೆದಿದ್ದ ಫಾರ್ಚುನರ್ ಕಾರಿನಲ್ಲಿ ಬಂದ ಸಮೀರ್
ಎಐ ವಿಡಿಯೋ ಮಾಡಿ ಧರ್ಮಸ್ಥಳ ದೇವಸ್ಥಾನದ (Dharmasthala Temple) ವಿರುದ್ಧ ಅಪಪ್ರಚಾರ ಮಾಡಿದ ಆರೋಪಕ್ಕೆ ಸಂಬಂದಿಸಿದಂತೆ ಯುಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈಗಾಗಲೇ ಸಮೀರ್ ಜಾಮೀನು ಪಡೆದುಕೊಂಡಿದ್ದಾನೆ. ಇನ್ನು ಈ ಪ್ರಕರಣ ಸಂಬಂಧ ಇಂದು (ಆಗಸ್ಟ್ 24) ವಿಚಾರಣೆಗೆ ಬರುವುದಾಗಿ ಹೇಳಿದ್ದ ಸಮೀರ್ ವಕೀಲರೊಂದಿಗೆ ಮಧ್ಯಾಹ್ನ ಬೆಳ್ತಂಗಡಿ ಪೊಲೀಸ್ ಠಾಣೆಗೆ ಆಗಮಿಸಿದ್ದಾನೆ. ಕೈಯಲ್ಲಿ ಲ್ಯಾಪ್ ಟಾಪ್ ಬ್ಯಾಗ್ ಹಿಡಿದು, ಮತ್ತೊಂದು ಕೈಯಲ್ಲಿ ದಾಖಲೆಗಳನ್ನು ಹಿಡಿದು ಕೂಲಿಂಗ್ ಗ್ಲಾಸ್ ಧರಿಸಿದ್ದ ಸಮೀರ್ ಮುಗುಳು ನಗೆ ಬೀರುತ್ತಲೇ ವಿಚಾರಣೆಗೆ ಹಾಜರಾಗಿದ್ದಾನೆ. ವಿಶೇಷ ಅಂದರೆ ಸಮೀರ್ ಬಂದಿರುವ ಫಾರ್ಚೂನರ್ ಕಾರಿನ ಹಿಂಭಾಗದಲ್ಲಿ ಕೇಸರಿ ಬಣ್ಣದಲ್ಲಿ ಧರ್ಮೋ ರಕ್ಷತಿ ರಕ್ಷಿತಃ ಎಂದು ಬರೆದಿರುವುದು ಎಲ್ಲರ ಗಮನಸೆಳೆದಿದೆ.
ಮಂಗಳೂರು, (ಆಗಸ್ಟ್ 24): ಎಐ ವಿಡಿಯೋ ಮಾಡಿ ಧರ್ಮಸ್ಥಳ ದೇವಸ್ಥಾನದ (Dharmasthala Temple) ವಿರುದ್ಧ ಅಪಪ್ರಚಾರ ಮಾಡಿದ ಆರೋಪಕ್ಕೆ ಸಂಬಂದಿಸಿದಂತೆ ಯುಟ್ಯೂಬರ್ ಸಮೀರ್ ಎಂ.ಡಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಈಗಾಗಲೇ ಸಮೀರ್ ಜಾಮೀನು ಪಡೆದುಕೊಂಡಿದ್ದಾನೆ. ಇನ್ನು ಈ ಪ್ರಕರಣ ಸಂಬಂಧ ಇಂದು (ಆಗಸ್ಟ್ 24) ವಿಚಾರಣೆಗೆ ಬರುವುದಾಗಿ ಹೇಳಿದ್ದ ಸಮೀರ್ ವಕೀಲರೊಂದಿಗೆ ಮಧ್ಯಾಹ್ನ ಬೆಳ್ತಂಗಡಿ ಪೊಲೀಸ್ ಠಾಣೆಗೆ ಆಗಮಿಸಿದ್ದಾನೆ. ಕೈಯಲ್ಲಿ ಲ್ಯಾಪ್ ಟಾಪ್ ಬ್ಯಾಗ್ ಹಿಡಿದು, ಮತ್ತೊಂದು ಕೈಯಲ್ಲಿ ದಾಖಲೆಗಳನ್ನು ಹಿಡಿದು ಕೂಲಿಂಗ್ ಗ್ಲಾಸ್ ಧರಿಸಿದ್ದ ಸಮೀರ್ ಮುಗುಳು ನಗೆ ಬೀರುತ್ತಲೇ ವಿಚಾರಣೆಗೆ ಹಾಜರಾಗಿದ್ದಾನೆ. ವಿಶೇಷ ಅಂದರೆ ಸಮೀರ್ ಬಂದಿರುವ ಫಾರ್ಚೂನರ್ ಕಾರಿನ ಹಿಂಭಾಗದಲ್ಲಿ ಕೇಸರಿ ಬಣ್ಣದಲ್ಲಿ ಧರ್ಮೋ ರಕ್ಷತಿ ರಕ್ಷಿತಃ ಎಂದು ಬರೆದಿರುವುದು ಎಲ್ಲರ ಗಮನಸೆಳೆದಿದೆ.