ಧಾರವಾಡ: ಸರ್ಕಾರಿ ಶಾಲಾ ಆವರಣದಲ್ಲಿ ಗುಂಡು ಪಾರ್ಟಿ!
ಧಾರವಾಡ ಗ್ರಾಮೀಣ ಠಾಣಾ ವ್ಯಾಪ್ತಿಯ ಮನಸೂರ ಗ್ರಾಮದ ಹೊರವಲಯದ ಸರ್ಕಾರಿ ಶಾಲೆಯ ಜಗುಲಿಯಲ್ಲಿ ದುರುಳರು ಮದ್ಯಪಾನ ಪಾರ್ಟಿ ಮಾಡಿ ತ್ಯಾಜ್ಯ ಬಿಟ್ಟುಹೋದ ಘಟನೆ ವರದಿಯಾಗಿದೆ. ದುಷ್ಕರ್ಮಿಗಳು ಅಧ್ವಾನ ಮಾಡಿ ಹೋದ ಕೃತ್ಯಕ್ಕೆ ಸಂಬಂಧಿಸಿದ ವಿಡಿಯೋ ಇಲ್ಲಿದೆ ನೋಡಿ.
ಧಾರವಾಡ, ಸೆಪ್ಟೆಂಬರ್ 4: ಧಾರವಾಡ ತಾಲೂಕಿನ ಮನಸೂರ ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಶಾಲಾ ಆವರಣದಲ್ಲಿ ದುಷ್ಕರ್ಮಿಗಳು ಮದ್ಯಪಾನ ಪಾರ್ಟಿ ಮಾಡಿ ಮದ್ಯದ ಪ್ಯಾಕೆಟ್, ಇತರೆ ತ್ಯಾಜ್ಯ ಬಿಟ್ಟು ಹೋದ ಘಟನೆ ಬುಧವಾರ ಬೆಳಗ್ಗೆ ಬೆಳಕಿಬಗೆ ಬಂದಿದೆ. ಮುಖ್ಯ ಶಿಕ್ಷಕರ ಕೊಠಡಿ ಮುಂಭಾಗದಲ್ಲಿ ಪಾರ್ಟಿ ಮಾಡಿ ಮದ್ಯದ ಟೆಟ್ರಾ ಪ್ಯಾಕ್, ಆಹಾರದ ಕವರ್ ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಬೆಳಗ್ಗೆ ಶಾಲೆಯ ಬಾಗಿಲು ತೆರೆಯಲು ಬಂದಾಗ ಶಿಕ್ಷಕರಿಗೆ ಆಘಾತ ಕಾದಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Latest Videos