ಮುಂಬೈ ಸಾಫ್ಟ್‌ವೇರ್ ಉದ್ಯೋಗ ಬಿಟ್ಟು ಬಂದ ಯುವಕ: ಧಾರವಾಡದ ಹಳೆಯ ಮನೆಯಲ್ಲೇ ಕಾಶಿಯ ವೈಭವ ಮರುಕಳಿಸಿದ ಕಟ್ಟಿಮಠ ಕುಟುಂಬ

Edited By:

Updated on: Oct 12, 2026 | 5:12 PM

ಧಾರವಾಡದ ಕಟ್ಟಿಮಠ ಕುಟುಂಬ, ಕಿತ್ತೂರು ಸಂಸ್ಥಾನದ ರಾಜಗುರುಗಳ ವಂಶಸ್ಥರು, ತಮ್ಮ 150 ವರ್ಷಗಳ ಇತಿಹಾಸವಿರುವ ಮನೆಯಲ್ಲಿ ಅದ್ಧೂರಿ ನವರಾತ್ರಿ ಆಚರಿಸುತ್ತಿದೆ. ಸಾಫ್ಟ್‌ವೇರ್ ಎಂಜಿನಿಯರ್ ಕಾರ್ತಿಕ್ ಕಟ್ಟಿಮಠ ಕಳೆದ ಒಂದೂವರೆ ದಶಕದಿಂದ ಕಾಶಿ ನವರಾತ್ರಿ ಉತ್ಸವದಂತಹ ವಿಭಿನ್ನ ಪರಿಕಲ್ಪನೆಗಳೊಂದಿಗೆ ಈ ಆಚರಣೆಗೆ ಹೊಸ ಸ್ಪರ್ಶ ನೀಡುತ್ತಿದ್ದಾರೆ. ಕಾಶಿಯ ದೇವಸ್ಥಾನಗಳ ಪ್ರತಿಕೃತಿಗಳು ಮತ್ತು ದೇವತೆಗಳ ಆರಾಧನೆ ಇಲ್ಲಿನ ವಿಶೇಷವಾಗಿದೆ.

ಧಾರವಾಡ, ಅ.12: ಕಿತ್ತೂರು ಸಂಸ್ಥಾನದ ರಾಜಗುರುಗಳ ವಂಶಸ್ಥರಾದ ಧಾರವಾಡದ ಕಟ್ಟಿಮಠ ಕುಟುಂಬವು ತಮ್ಮ ಪೂರ್ವಜರ ಪರಂಪರೆಯನ್ನು ಮುಂದುವರೆಸಿಕೊಂಡು ಅದ್ಧೂರಿ ನವರಾತ್ರಿ ಉತ್ಸವವನ್ನು ಆಚರಿಸುತ್ತಿದೆ. ಧಾರವಾಡ ನಗರದ ಮಂಗಳವಾರ ಪೇಟೆಯಲ್ಲಿರುವ ಸುಮಾರು 150-200 ವರ್ಷಗಳ ಹಳೆಯ ಮನೆಯಲ್ಲಿ, ಈ ಆಚರಣೆಯು ತಲೆಮಾರುಗಳಿಂದ ನಡೆದುಬಂದಿದೆ. ಕುಟುಂಬದ ಯುವಕ, ಸಾಫ್ಟ್‌ವೇರ್ ಎಂಜಿನಿಯರ್ ಕಾರ್ತಿಕ್ ಕಟ್ಟಿಮಠ, ಕಳೆದ ಒಂದೂವರೆ ದಶಕದಿಂದ ಈ ನವರಾತ್ರಿ ಆಚರಣೆಗೆ ವಿಶಿಷ್ಟ ಸ್ಪರ್ಶ ನೀಡುತ್ತಿದ್ದಾರೆ. ಈ ಬಾರಿ ಕಾಶಿಕಾ ನವರಾತ್ರಿ ಉತ್ಸವ ಎಂಬ ಪರಿಕಲ್ಪನೆಯಲ್ಲಿ, ಕಾಶಿಯ ವಿವಿಧ ದೇವಸ್ಥಾನಗಳ ಪ್ರತಿಕೃತಿಗಳನ್ನು ನಿರ್ಮಿಸಿ, ಅಲ್ಲಿನ ದೇವತೆಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ. ಬಿಂದು ಮಾಧವ, ವಿಶಾಲಾಕ್ಷಿ, ಗಂಗಾ, ಕಾಶಿಕಾ ದೇವಿಯರಿಗೆ ಪ್ರತಿದಿನ ವಿಭಿನ್ನ ಪೂಜೆಗಳು ನಡೆಯುತ್ತವೆ. ಮುಂಬೈನಲ್ಲಿ ಉದ್ಯೋಗದಲ್ಲಿರುವ ಕಾರ್ತಿಕ್, ರಜೆ ಹಾಕಿ ಬಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಸ್ವತಃ ದೇವಿಯ ಅಲಂಕಾರ ಮತ್ತು ಮೂರ್ತಿಗಳ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ಧಾರ್ಮಿಕ ಕಾರ್ಯಕ್ರಮಗಳು ಧಾರವಾಡದ ಜನರಿಗೆ ಕಾಶಿಯ ಧಾರ್ಮಿಕ ಪರಂಪರೆಯನ್ನು ಪರಿಚಯಿಸುತ್ತಿವೆ. ಆಧ್ಯಾತ್ಮಿಕ ಗುರುಗಳು ಮತ್ತು ಮಠಾಧೀಶರೂ ಈ ವಿಶಿಷ್ಟ ಆಚರಣೆಗೆ ಭೇಟಿ ನೀಡುತ್ತಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 12, 2026 05:12 PM
Loading...
Unable to load recommendations.
Follow Us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 20 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.

Read More