Dhawan Rakesh: ಸಿದ್ದರಾಯ್ಯರನ್ನು ಅಭಿನಂದಿಸಲು ಇಂದು ಪುನಃ ಅವರ ನಿವಾಸಕ್ಕೆ ಬಂದ ಧವನ್ ರಾಕೇಶ್
ಇವತ್ತಿನದು ನಿಖರ ಮತ್ತು ಅಧಿಕೃತ ಸುದ್ದಿ. ಹಾಗಾಗೇ, ಧವನ್ ಮತ್ತೊಮ್ಮೆ ಸಿದ್ದರಾಮಯ್ಯನವರ ಸರ್ಕಾರೀ ನಿವಾಸಕ್ಕೆ ಕಾರಲ್ಲಿ ಅಗಮಿಸಿದ್ದಾರೆ.
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಎರಡನೇ ಬಾರಿ ಆಯ್ಕೆಯಾಗಿರುವ ಸಿದ್ದರಾಮಯ್ಯ (Siddaramaiah) ಅವರ ಬೆಂಗಳೂರು ಮನೆಯಲ್ಲೂ ಸಡಗರ ಸಂಭ್ರಮ. ನಿಮಗೆ ನಿನ್ನೆಯ ಘಟನೆ ನೆನಪಿರಬಹುದು. ಕಾಂಗ್ರೆಸ್ ಪಕ್ಷದ ಒಂದಿಬ್ಬರು ನಾಯಕರು, ಮಲ್ಲಿಕಾರ್ಜುನ ಖರ್ಗೆ, ಮತ್ತು ರಾಹುಲ್ ಗಾಂಧಿ ಮನೆಯಲ್ಲಿ ಏನು ನಡೆಯುತ್ತಿದೆ ಎಂಬ ಅರಿವಿಲ್ಲದೆ ಈಡಿಯಟ್ ಗಳ ಹಾಗೆ ಸಿದ್ದರಾಮಯ್ಯರನ್ನು ಸಿಎಂ ಮಾಡಲಾಗಿದೆ ಅಂತ ಹೇಳಿದ್ದರಿಂದ ಆ ಸುದ್ದಿ ದೇಶದೆಲ್ಲೆಡೆ ಹಬ್ಬಿತ್ತು. ಅದರೆ ಮಧ್ಯಾಹ್ನ ರಂದೀಪ್ ಸುರ್ಜೆವಾಲಾ (Randeep Surjewala) ವಿಷಯ ಸ್ಪಷ್ಟಪಡಿಸಿದರು. ಸುದ್ದಿ ನಂಬಿದ್ದ ಸಿದ್ದರಾಮಯ್ಯ ಮೊಮ್ಮಗ ಧವನ್ ರಾಕೇಶ್ (Dhawan Rakesh) ತಾತನ ಮನೆಗೆ ಧಾವಿಸಿದ್ದರು. ಆದರೆ, ಇವತ್ತಿನದು ನಿಖರ ಮತ್ತು ಅಧಿಕೃತ ಸುದ್ದಿ. ಹಾಗಾಗೇ, ಧವನ್ ಮತ್ತೊಮ್ಮೆ ಸಿದ್ದರಾಮಯ್ಯನವರ ಸರ್ಕಾರೀ ನಿವಾಸಕ್ಕೆ ಕಾರಲ್ಲಿ ಅಗಮಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ