ರೇಂಜ್ ರೋವರ್ ಖರೀದಿಸಿದ ದೀಕ್ಷಿತ್ ಶೆಟ್ಟಿ; ಬಿಎಂಟಿಸಿಯಲ್ಲಿ ಓಡಾಡುತ್ತಿದ್ದ ಹೀರೋ ಕೈಯಲ್ಲಿ ಐಷಾರಾಮಿ ಕಾರು

Edited By:

Updated on: Oct 15, 2025 | 9:48 AM

‘ದಿಯಾ’ ಸಿನಿಮಾ ಮೂಲಕ ನಟ ದೀಕ್ಷಿತ್ ಅವರು ಜನಪ್ರಿಯತೆ ಪಡೆದರು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ದೀಕ್ಷಿತ್ ಅವರು ಹೀರೋ ಪಾತ್ರದಲ್ಲಿ ಕಾಣಿಸಿಕೊಂಡರು. ಸ್ಯಾಡ್ ಎಂಡಿಂಗ್ ಹೊಂದಿದ್ದ ಈ ಸಿನಿಮಾ ಸೂಪರ್ ಹಿಟ್ ಆಯಿತು. ಆ ನಟ ಈಗ ರೇಂಜ್ ರೋವರ್ ಖರೀದಿಸಿದ್ದಾರೆ/

‘ದಿಯಾ’ ಖ್ಯಾತಿಯ ನಟ ದೀಕ್ಷಿತ್ ಶೆಟ್ಟಿ ಅವರು ಕನ್ನಡ ಹಾಗೂ ಪರಭಾಷೆಯಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಈಗ ಅವರು ದುಬಾರಿ ಕಾರು ಖರೀದಿ ಮಾಡಿದ್ದಾರೆ. ಅದು ಅಂತಿಂಥ ಕಾರಲ್ಲ, ರೇಂಜ್ ರೋವರ್. ಈ ವಿಡಿಯೋ ಹಂಚಿಕೊಂಡಿರೋ ಅವರು,  ‘ನನ್ನ ಸಿನಿಮಾ ಪ್ರಯಾಣವನ್ನು ಬಿಎಂಟಿಸಿ ಪ್ರಯಾಣಿಕನಾಗಿ ಪ್ರಾರಂಭಿಸಿದೆ. ಈಗ ರೇಂಜ್ ರೋವರ್‌ನಲ್ಲಿ ಪ್ರಯಾಣಿಸುತ್ತಿದ್ದೇನೆ. ಜೀವನದ ಚಿತ್ರಕಥೆಯು ಇದಕ್ಕಿಂತ ದಯೆಯಿಂದಿರಲು ಸಾಧ್ಯವಿಲ್ಲ. ನನ್ನ ಸಿನಿಮಾ ಪ್ರಯಾಣದ ಭಾಗವಾಗಿದ್ದಕ್ಕಾಗಿ ಧನ್ಯವಾದಗಳು. ತುಂಬಾ ಪ್ರೀತಿ ಮತ್ತು ಕೃತಜ್ಞತೆ’ ಎಂದು ಅವರು ಬರೆದುಕೊಂಡಿದ್ದಾರೆ. ದೀಕ್ಷಿತ್ ಅವರು ಸದ್ಯ ‘ಗರ್ಲ್​ಫ್ರೆಂಡ್’ ಸಿನಿಮಾ ಕೆಲಸದಲ್ಲಿ ಬ್ಯುಸಿ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.